ಮೈಸೂರು: ಈಡಿಗ-ಬಿಲ್ಲವ ಮತ್ತು ಅದರ ಉಪಜಾತಿಗಳ ಕುಲಶಾಸ್ತ್ರೀಯ ಅಧ್ಯಯನದ ಪ್ರಾಯೋಗಿಕ ಹಂತ ಮುಗಿದಿದ್ದು, ಸಮಗ್ರ ಅಧ್ಯಯನದ ರೂಪರೇಷೆಯನ್ನು ಅಂತಿಮಗೊಳಿಸಲಾಗಿದೆ.

ರಾಜ್ಯ ಸರ್ಕಾರದ ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರವು (ಸಿಎಸ್ಎಸ್ಐ) ಅಧ್ಯಯನ ನಡೆಸಲಿದ್ದು, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಶೋಧನಾ ತಂಡವನ್ನೂ ರಚಿಸಲಾಗಿದೆ. ಅಧ್ಯಯನಕ್ಕೆಂದು ರಾಜ್ಯ ಸರ್ಕಾರ ₹ 18.75 ಲಕ್ಷವನ್ನು ಬಿಡುಗಡೆ ಮಾಡಿದೆ.

ಸರ್ಕಾರದ ಹಿಂದುಳಿದ ಜಾತಿಗಳ ಪಟ್ಟಿಯ ಕ್ರಮ ಸಂಖ್ಯೆ 155ರಡಿ ಬರುವಂತೆ, ಈಡಿಗ-ಬಿಲ್ಲವ ಸಮುದಾಯವು ಈಡಿಗ, ಬೆಳ್ಚಡ್, ಪೂಜಾರಿ, ದೇಶಭಂಡಾರಿ, ಎಲಿಗಾ, ಇಲಿಗಾಹಳೇಪೈಕ್, ಹಳೇಪೈಕಾರು, ಬಿಲ್ಲವ, ದೇವರ್, ಮಲೆಯಾಳಿ ಬಿಲ್ಲವ, ದೀವರ್, ದೇವರಮಕ್ಕಳು, ದೀವರಮಕ್ಕಳು, ನಾಮಧಾರಿ, ಕಲಾಲ್, ಗೌಂಡ್ಲಾ, ಗೂಂಡ್ಲಾ, ಥಿಯಾನ್, ತಿಯ್ಯನ್, ತಿಯಾನ್, ಈಜವ, ತಿಯ್ಯ, ನಾಡರ್, ಗಮಲ್ಲ ಸೇರಿದಂತೆ 26 ಉಪಜಾತಿಗಳನ್ನು ಹೊಂದಿದೆ. ಈ ಸಮಾಜವನ್ನು ರಾಜ್ಯದ ಕರಾವಳಿ ಭಾಗದಲ್ಲಿ ಬಿಲ್ಲವರು ಎನ್ನಲಾಗುತ್ತದೆ.

ಹೊರ ರಾಜ್ಯಗಳಿಗೂ ಭೇಟಿ: ‘ಸಮುದಾಯವು ಕರ್ನಾಟಕದೊಂದಿಗೆ, ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಲ್ಲೂ ಹೆಚ್ಚಾಗಿ ಕಂಡುಬರುತ್ತದೆ. ಅಧ್ಯಯನ ತಂಡವು ಅಲ್ಲಿಗೂ ಭೇಟಿ ನೀಡಲಿದೆ. ಪುನರ್ ಜಾತಿಗಣತಿ ವಿಚಾರ ಹಾಗೂ ಒಳ ಮೀಸಲಾತಿಯ ಬೇಡಿಕೆ ಮುನ್ನೆಲೆಗೆ ಬಂದಿರುವುದರಿಂದ ಅಧ್ಯಯನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ’ ಎನ್ನುತ್ತಾರೆ ಸಿಎಸ್ಎಸ್ಐ ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ. ನಂಜುಂಡ.

ಅಧ್ಯಯನ ನಡೆಸಬೇಕೆಂದು ಸಮಾಜ, ಸ್ವಾಮೀಜಿಗಳು ಹಾಗೂ ಮುಖಂಡರಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೇಡಿಕೆ ಬಂದಿತ್ತು. ಕಲಬುರಗಿಯಲ್ಲಿ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜನವರಿಯಲ್ಲಿ ನಡೆದಿದ್ದ ಸಭೆ ಸೇರಿ ಹಲವು ಸಂದರ್ಭಗಳಲ್ಲಿ ಹಕ್ಕೊತ್ತಾಯವನ್ನೂ ಮಂಡಿಸಲಾಗಿತ್ತು.

ತಾಂತ್ರಿಕ ಕಾರಣದಿಂದ ವಿಳಂಬ:

ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2023ರ ಫೆಬ್ರುವರಿಯಲ್ಲೇ ಅನುಮತಿ ನೀಡಿತ್ತು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲೂ ಚರ್ಚೆಯಾಗಿತ್ತು.

‘ಕಳೆದ ಆರ್ಥಿಕ ವರ್ಷದಲ್ಲೇ ಅಧ್ಯಯನ ಆರಂಭವಾಗಬೇಕಿದ್ದು, ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಪ್ರತಿ ಜಿಲ್ಲೆಯಲ್ಲಿರುವ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳ ಬಗ್ಗೆ ಆಳವಾದ ಮಾಹಿತಿ ಸಂಗ್ರಹಿಸಲಾಗುವುದು’ ಎಂದು ನಂಜುಂಡ ಮಾಹಿತಿ ನೀಡಿದರು.

‘ಈಡಿಗ ಸಮಾಜವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂಬ ಕೂಗು ಕೂಡ ಎದ್ದಿರುವುದರಿಂದ ಶೀಘ್ರ ಅಧ್ಯಯನ ಕಾರ್ಯ ನಡೆಯಬೇಕು’ ಎನ್ನುತ್ತಾರೆ ಸಮುದಾಯದ ಮುಖಂಡರು.

Quote - ಅಧ್ಯಯನಕ್ಕೆ 18 ತಿಂಗಳಿಗಿಂತ ಹೆಚ್ಚು ಸಮಯ ಬೇಕು. ಸರ್ಕಾರದ ಆದೇಶದಂತೆ ಸಮುದಾಯದ ಸಾಕ್ಷ್ಯಚಿತ್ರವನ್ನೂ ತಯಾರಿಸಬೇಕು. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಡಿ.ಸಿ. ನಂಜುಂಡ ಸಹ ಪ್ರಾಧ್ಯಾಪಕ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಮೈಸೂರು ವಿ.ವಿ

ಹಲವು ರೀತಿಯಲ್ಲಿ...

‘ಈಡಿಗ-ಬಿಲ್ಲವ ಸಮುದಾಯದ ಕೆಲವು ಉಪಜಾತಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿವೆ ಎಂಬ ವರದಿ ಇದೆ. ಕೆಲವು ತೀರಾ ಹಿಂದುಳಿದಿದ್ದು ಅವುಗಳ ಒಳಗೊಳ್ಳುವಿಕೆಗೆ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸಲಾಗುವುದು. ಅಧ್ಯಯನವು ಗುಂಪು ಚರ್ಚೆ ಸಮೀಕ್ಷೆ ವಿಚಾರಸಂಕಿರಣ ಕಾರ್ಯಾಗಾರ ಮೌಲ್ಯಮಾಪನವನ್ನು ಒಳಗೊಂಡಿದೆ. ಈಡಿಗ ಮತ್ತು ಅದರ ಉಪಜಾತಿಗಳಿಗೆ ಸಂಬಂಧಿಸಿ ಮಾಹಿತಿಯುಳ್ಳವರು ಕೇಂದ್ರವನ್ನು (ಮೊ.ಸಂ. 90081 64514) ಸಂಪರ್ಕಿಸಬಹುದು’ ಎಂದು ನಂಜುಂಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.