ಮೈಸೂರು: ಮಧುಮೇಹ ಸಮಸ್ಯೆಗಳಿಗೆ ಒಂದೇ ಸೂರಿನಡಿ ಸಮಗ್ರ ಆರೈಕೆ, ಚಿಕಿತ್ಸೆ ನೀಡುವ ಕೇಂದ್ರವೊಂದು ಮೈಸೂರಿನಲ್ಲಿ ತಲೆ ಎತ್ತಲಿದೆ.

ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ, ಬೆಂಗಳೂರಿನಲ್ಲಿರುವ ‘ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ’ (ಕೆಐಇಆರ್)ಯ ಪ್ರಾದೇಶಿಕ ಕೇಂದ್ರವನ್ನು ಇಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ, ಹಲವು ಆರೋಗ್ಯ ಸೇವೆ ದೊರೆಯಲಿರುವ ಪ್ರಾದೇಶಿಕ ಕೇಂದ್ರಗಳ ಪಟ್ಟಿಗೆ ಹೊಸದಾಗಿ ಇದು ಸೇರ್ಪಡೆಯಾಗಲಿದೆ.

ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಒಟ್ಟು ₹100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಎಂಡೊಕ್ರೈನಾಲಜಿ (Endocrinology– ನಿರ್ನಾಳಗ್ರಂಥಿವಿಜ್ಞಾನ) ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು 2025–26ನೇ ಸಾಲಿನ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ಮೈಸೂರಿನಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ. ಮೈಸೂರು ಕೇಂದ್ರಕ್ಕೆ ₹ 50 ಕೋಟಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ: ರಾಜ್ಯ ಸರ್ಕಾರವು 2007ರಲ್ಲಿ ‘ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಡಯಾಬೆಟಾಲಜಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಇದನ್ನು 2016ರಲ್ಲಿ ‘ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ’ (ಕೆಐಇಆರ್) ಎಂದು ಮರುನಾಮಕರಣ ಮಾಡಲಾಗಿದೆ. ಇದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮಧುಮೇಹ ನ್ಯೂನತೆ ಉಳ್ಳವರಿಗೆ ಚಿಕಿತ್ಸೆ ನೀಡಲು ಎಲ್ಲಾ ಆಧುನಿಕ ಉಪಕರಣಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಂಡೋಕ್ರೈನಾಲಜಿ, ಪೊಡಿಯಾಟ್ರಿ, ವಿಟ್ರಿಯೊ ರೆಟಿನಾ ಮತ್ತು ನೆಫ್ರಾಲಜಿ ವಿಭಾಗಗಳನ್ನು ಈ ಸಂಸ್ಥೆ ಹೊಂದಿದೆ. ಮೈಸೂರಿನಲ್ಲಿ ಸ್ಥಾಪನೆಯಾಗಲಿರುವ ಪ್ರಾದೇಶಿಕ ಕೇಂದ್ರದಲ್ಲೂ ಹಲವು ಸೇವೆಗಳು ದೊರೆಯಲಿವೆ.

ಎಂಡೊಕ್ರೈನಾಲಜಿ (ನಿರ್ನಾಳಗ್ರಂಥಿ)ಯ ಅಸ್ವಸ್ಥತೆ ಹಾಗೂ ಮಧುಮೇಹದಿಂದ ಎದುರಾಗಬಹುದಾದ ಸಮಸ್ಯೆಗಳ ರೋಗಿಗಳಿಗೆ ಅತ್ಯಾಧುನಿಕ ಸೇವೆಯನ್ನು ಕೈಗೆಟುಕುವ ದರಗಳಲ್ಲಿ ಹಾಗೂ ಸಕಾಲದಲ್ಲಿ ಒದಗಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸಾರ್ವಜನಿಕ ಜಾಗೃತಿಗಾಗಿ ತರಬೇತಿ, ಸುಧಾರಿತ ಸಂಶೋಧನೆಗೆ ವೇದಿಕೆ ಒದಗಿಸುವುದು ಮತ್ತು ಆಧುನಿಕ ಸಂಶೋಧನಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ನಿರ್ನಾಳಗ್ರಂಥಿಯ ಅಸ್ವಸ್ಥತೆ ಮತ್ತು ಮಧುಮೇಹದ ವಿರುದ್ಧದ ಹೋರಾಟದ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.

‘ಪ್ರಸ್ತುತ ನಮ್ಮ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೊಕ್ರೈನಾಲಜಿ ಹಾಗೂ ಮಧುಮೇಹ ಸಮಸ್ಯೆಗೆ ಚಿಕಿತ್ಸೆ ವಿಭಾಗ ಕಾರ್ಯನಿರ್ವಹಿಸುತ್ತಿದೆ. ಅಲ್ಲಿ ನಿತ್ಯ 100ರಿಂದ 120 ಮಂದಿಗೆ ಸೇವೆ ನೀಡಲಾಗುತ್ತಿದೆ. ಪ್ರತ್ಯೇಕ ಆಸ್ಪತ್ರೆಯೇ ನಿರ್ಮಾಣಗೊಂಡರೆ ಹೆಚ್ಚಿನ ಮಂದಿಗೆ ಅರೋಗ್ಯ ಸೇವೆ ದೊರೆಯಲಿದೆ. ಅದನ್ನು ಕೆಐಇಆರ್ ನಿರ್ವಹಿಸಲಿದೆ’ ಎಂದು ಎಂಎಂಸಿಆರ್ಐ ನಿರ್ದೇಶಕಿ ಡಾ.ಕೆ.ಆರ್. ದಾಕ್ಷಾಯಣಿ ತಿಳಿಸಿದರು.

ಕೇಂದ್ರಕ್ಕೆ ತಜ್ಞ ವೈದ್ಯರು ಮೊದಲಾದ ಸಿಬ್ಬಂದಿಯನ್ನು ಸರ್ಕಾರ ಒದಗಿಸಲಿದೆ. ಮಧುಮೇಹ ಸಮಸ್ಯೆಯುಳ್ಳವರಿಗೆ ಸಮಗ್ರ ಆರೋಗ್ಯ ಸೇವೆ ಇಲ್ಲಿ ದೊರೆಯಲಿದೆ

–ಡಾ.ಕೆ.ಆರ್.ದಾಕ್ಷಾಯಣಿ ನಿರ್ದೇಶಕಿ ಎಂಎಂಸಿಆರ್ಐ ಮೈಸೂರು‘

ಮೈಸೂರಿನಲ್ಲಿ ಕೆಐಇಆರ್ ಪ್ರಾದೇಶಿಕ ಕೇಂದ್ರಕ್ಕೆ ಜಾಗ ನೀಡಲಾಗಿದೆ ಟೆಂಡರ್ ನಡೆದಿದೆ ಎಂಬ ಮಾಹಿತಿ ಇದೆ. ಸರ್ಕಾರದಿಂದ ನಮಗೆ ಅಧಿಕೃತ ಆದೇಶ ಬಂದಿಲ್ಲ

–ಡಾ. ರವಿ ಕೆ. ನಿರ್ದೇಶಕರು ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು

ಮೈಸೂರು ಭಾಗಕ್ಕೆ ಮಹತ್ವದ ಕೊಡುಗೆ...

‘ಎಂಡೊಕ್ರೈನಾಲಜಿ ಪ್ರಾದೇಶಿಕ ಕೇಂದ್ರವು ಮೈಸೂರು ಭಾಗಕ್ಕೆ ದೊರೆಯುತ್ತಿರುವ ಮತ್ತೊಂದು ಮಹತ್ವದ ಕೊಡುಗೆಯಾಗಿದೆ. ಮೈಸೂರು ನಗರ ಜಿಲ್ಲೆಯೊಂದಿಗೆ ಚಾಮರಾಜನಗರ ಹಾಸನ ಮಂಡ್ಯ ಹಾಗೂ ಕೊಡಗು ಜಿಲ್ಲೆಗಳವರಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ (ಎಂಎಂಸಿಆರ್ಐ) ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಣಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೇಂದ್ರಕ್ಕಾಗಿ ಕೆಆರ್ಎಸ್ ರಸ್ತೆಯಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣಗೊಳ್ಳಲಿರುವ ಜಾಗದ ಪಕ್ಕದಲ್ಲಿಯೇ ಎರಡು ಎಕರೆ ಜಾಗವನ್ನು ಕೆಐಇಆರ್ಗೆ ಹಸ್ತಾಂತರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು ಕಾಮಗಾರಿಗೆ ಶೀಘ್ರದಲ್ಲೆ ಚಾಲನೆ ದೊರೆಯಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಲಿದೆ. ಒಟ್ಟು 40 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇದಾಗಲಿದೆ. ಪುರುಷರು ಮಹಿಳೆಯರಿಗೆ ಪ್ರತ್ಯೇಕ ವಾರ್ಡ್ ಇರಲಿದೆ. 10 ಹಾಸಿಗೆಗಳನ್ನು ಐಸಿಯುಗೆ ಬಳಸಲಾಗುವುದು’ ಎಂದು ಮಾಹಿತಿ ನೀಡಿದರು. ‘ಜೀವನಶೈಲಿ ಬದಲಾವಣೆ ಮೊದಲಾದ ಕಾರಣದಿಂದಾಗಿ ಮಧುಮೇಹ ಸಮಸ್ಯೆಯು ಜಾಸ್ತಿಯಾಗುತ್ತಿದೆ. ಮಕ್ಕಳಲ್ಲೂ ಆ ನ್ಯೂನತೆ ಕಂಡುಬರುತ್ತಿದೆ. ನಿರ್ನಾಳಗ್ರಂಥಿಯ ಅಸ್ವಸ್ಥತೆಯೂ ದೊಡ್ಡ ಸಮಸ್ಯೆಯಾಗಿದೆ. ಇವುಗಳಿಂದ ಬಳಲುವವರಿಗೆ ಪ್ರತ್ಯೇಕವಾಗಿ ಸಮಗ್ರ ಚಿಕಿತ್ಸೆ ಮೈಸೂರಿನಲ್ಲೇ ಲಭ್ಯವಾಗಲಿದೆ. ಕೃತಕ ಅಂಗಾಂಗ ಜೋಡಣೆಯೂ ಸಾಧ್ಯವಾಗಲಿದೆ’ ಎನ್ನುತ್ತಾರೆ ಅವರು.

ಸಮಗ್ರ ಆರೈಕೆಗೆ...

ಮಧುಮೇಹ ಮತ್ತು ಎಂಡೋಕ್ರೈನ್ ರೋಗಗಳ ಕ್ಷೇತ್ರದಲ್ಲಿ ರೋಗನಿರೋಧಕ ರೋಗನಿವಾರಕ ಮತ್ತು ಅರೋಗ್ಯ ಪ್ರೇರಕ ಸಮಗ್ರ ಆರೈಕೆ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಕೇಂದ್ರವು ಸಿದ್ಧಗೊಂಡಲ್ಲಿ ಸಮಗ್ರ ಮಧುಮೇಹ ಮತ್ತು ಎಂಡೋಕ್ರೈನ್ ರೋಗಗಳ ಆರೈಕೆಯು ಒಂದೇ ಸೂರಿನಡಿ ದೊರೆಯಲಿದೆ. ಮಧುಮೇಹ ಮತ್ತು ಅಂತಃಸ್ರಾವವಿಜ್ಞಾನ ಕ್ಷೇತ್ರದಲ್ಲಿ ಶೈಕ್ಷಣಿಕ ಸಂಶೋಧನೆ ಗುಣಮಟ್ಟದ ಮೌಲ್ಯಮಾಪನ ಸಾಧ್ಯವಾಗಲಿದೆ ಎಂದು ಆಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.