ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿ.ನರಸೀಪುರ | ಸ್ಫೋಟಕ ವಸ್ತು ಪತ್ತೆ: ತನಿಖೆ

Published : 24 ಆಗಸ್ಟ್ 2024, 16:26 IST
Last Updated : 24 ಆಗಸ್ಟ್ 2024, 16:26 IST
ಫಾಲೋ ಮಾಡಿ
Comments

ತಿ.ನರಸೀಪುರ (ಮೈಸೂರು ಜಿಲ್ಲೆ): ತಾಲ್ಲೂಕಿನ ಕೆಂಪಯ್ಯನ ಹುಂಡಿ ಗ್ರಾಮದ ಗೇಟ್ ಬಳಿಯಿರುವ ‘ಫ್ರೆಂಡ್ಸ್‌ ಹೋಟೆಲ್’ನಲ್ಲಿ ಗುರುವಾರ ರಾತ್ರಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಜಿಲ್ಲಾ ಪೊಲೀಸರು ಹಾಗೂ ಬಾಂಬ್ ತಜ್ಞರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ.

‘ವ್ಯಕ್ತಿಯೊಬ್ಬ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್‌ ಇಟ್ಟು ತೆರಳಿದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಹೋಟೆಲ್‌ ಸಿಬ್ಬಂದಿಯು ಪರಿಶೀಲಿಸಿದಾಗ 9 ಡಿಟೊನೆಟರ್‌ಗಳು, 9 ಜಿಲೆಟಿನ್ ಜೆಲ್, ಒಂದು ಬಾಂಬ್, ಫ್ಯೂಸ್ ವೈರ್ ಕಂಡು ಬಂತು. ಸಮೀಪದ ಮರದ ರೆಂಬೆಗೆ ತೂಗಿ ಹಾಕಿ ಮಾಹಿತಿ ನೀಡಿದರು’ ಎಂದು ಇನ್‌ಸ್ಪೆಕ್ಟರ್ ಧನಂಜಯ ತಿಳಿಸಿದ್ದಾರೆ.

‘ಸ್ಫೋಟಕಗಳು ಎಲ್ಲಿಂದ ಬಂದವೆಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ ‘ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT