ಮೈಸೂರು: ‘ಸಾಲ ವಸೂಲಾತಿ ಬಗ್ಗೆ ರೈತರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಚರ್ಚಿಸಲು ಕಾವೇರಿ ಗ್ರಾಮೀಣ ಬ್ಯಾಂಕ್ ಕೇಂದ್ರ ಕಚೇರಿಗೆ ರೈತರ ನಿಯೋಗ ತೆರಳಲಾಗುವುದು’ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲ ಬ್ಯಾಂಕುಗಳು ಓಟಿಎಸ್ನಲ್ಲಿ ಸಾಲ ತಿರುವಳಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾವೇರಿ ಗ್ರಾಮೀಣ ಬ್ಯಾಂಕಿನ ಶಾಖೆಗಳಲ್ಲಿ ಓಟಿಎಸ್ ಸಾಲ ತಿರುವಳಿ ಮಾಡಲು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜ.29ರಂದು ಬ್ಯಾಂಕ್ನ ಬಳ್ಳಾರಿಯ ಮುಖ್ಯ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಲಾಗುವುದು’ ಎಂದರು.

‘ವಾಜಮಂಗಲದಿಂದ ಕಡಕೋಳದವರೆಗೆ ರೈತರ ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಹೈಟೆನ್ಶನ್ ತಂತಿ ಹೋಗುವ ಜಮೀನುಗಳಿಗೆ ಪರಿಹಾರದ ಮೊತ್ತವನ್ನು 4 ಪಟ್ಟು ಹೆಚ್ಚಿಸಲಾಗಿದೆ. ಈ ಬಗ್ಗೆ ರೈತರು ಚಿಂತನೆ ನಡೆಸಬೇಕು’ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್, ಮೈಸೂರು ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್, ಕೋಟೆ ಸುನೀಲ್, ದೇವನೂರು ಮಹದೇವಸ್ವಾಮಿ, ರವಿಕುಮಾರ್, ರಂಗರಾಜು, ನಂಜುಂಡಸ್ವಾಮಿ, ನಾಗೇಂದ್ರ, ಮಂಟೇಸ್ವಾಮಿ, ಶಿವಣ್ಣ, ಕಮಲಮ್ಮ, ಪ್ರಭಾಕರ್, ಕೂಡನಹಳ್ಳಿ ಸೋಮಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.