ಮೈಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಜಾನುವಾರು ಪರಿಷೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳ ಖರೀದಿ ಭರಾಟೆ ಜೋರಾಗಿದೆ.
ಹಳ್ಳಿಕಾರ್ ಜೋಡೆತ್ತುಗಳ ಖರೀದಿಗಾಗಿ ರಾಜ್ಯದ ಗದಗ, ಧಾರವಾಡ, ಹಾವೇರಿ, ರಾಯಚೂರು, ಬಳ್ಳಾರಿ, ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ರೈತರು ಪರಿಷೆಗೆ ಬಂದಿದ್ದಾರೆ.
ಹಾಲು ಹಲ್ಲಿನ ಜೋಡಿ ಕರುಗಳಿಗೆ ₹1.20 ಲಕ್ಷ, ಉಳುಮೆ ಮಾಡುವ ಜೋಡೆತ್ತುಗಳಿಗೆ ₹2 ಲಕ್ಷ, ಮೂರಲ್ಲಿನ ಜೋಡೆತ್ತುಗಳಿಗೆ ₹1.60 ಲಕ್ಷದವರೆಗೂ ಮಾರಾಟವಾಗುತ್ತಿದೆ.