ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ನಡುವೆಯೂ ರೈತರಿಗೆ ಕಿರುಕುಳ; ರಾಜ್ಯ ರೈತ ಸಂಘದ ಪ್ರತಿಭಟನೆ

Published 19 ಫೆಬ್ರುವರಿ 2024, 16:09 IST
Last Updated 19 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಮೈಸೂರು: ‘ಕರೂರ್‌ ವೈಶ್ಯ ಬ್ಯಾಂಕ್‌ ರೈತರಿಗೆ ತೊಂದರೆ ನೀಡುತ್ತಿದೆ’ ಎಂದು ಆರೋಪಿಸಿ ರಾಜ್ಯ ರೈತ ಸಂಘದ ಸಂಘದ ಸದಸ್ಯರು ಬ್ಯಾಂಕ್‌ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿದರು.

ಹೊಸಕೋಟೆ ಬಸವರಾಜ್‌ ಮಾತನಾಡಿ, ‘ಬರಗಾಲದ ನಡುವೆಯೂ ಕೃಷಿ ಸಾಲ ವಸೂಲಿಗಾಗಿ ಬ್ಯಾಂಕ್‌ಗಳು ರೈತರಿಗೆ ಕಿರುಕುಳ ನೀಡುತ್ತಿವೆ. ನ್ಯಾಯಾಲಯದಲ್ಲಿ ದಾವೆ ಹೂಡುವುದು, ಆನ್‌ಲೈನ್‌ ಮೂಲಕ ರೈತರ ಆಸ್ತಿಯನ್ನು ಹರಾಜು ಹಾಕುವ ಕೆಲಸ ನಡೆಯುತ್ತಿದೆ. ಕರೂರು ವೈಶ್ಯ ಬ್ಯಾಂಕ್‌ ಮೂಲಕ ಎಚ್‌.ಡಿ ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ರೈತರಿಗೆ ಮಧ್ಯವರ್ತಿಗಳ ಮೂಲಕ ₹4 ಲಕ್ಷ ಸಾಲ ಮಂಜೂರು ಮಾಡಿ ಅದರಲ್ಲಿ ₹2 ಲಕ್ಷ ಲಪಟಾಯಿಸಿದ್ದಾರೆ’ ಎಂದು ದೂರಿದರು.

‘ಈ ಬಗ್ಗೆ ತನಿಖೆ ನಡೆದು ಬ್ಯಾಂಕ್‌ ಅಧಿಕಾರಗಳ ಮೇಲೆ ಕ್ರಮ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ. ವಾಸ್ತವ ಹೀಗಿದ್ದರೂ ಬ್ಯಾಂಕ್‌ ನ್ಯಾಯಾಲಯದಲ್ಲಿ ದಾವೆ ಹೂಡಿ, ಪೂರ್ಣ ಸಾಲ ಮತ್ತು ಬಡ್ಡಿಗಾಗಿ ತಗಾದೆ ತೆಗೆದು ರೈತರಿಗೆ ತೊಂದರೆ ನೀಡುತ್ತಿದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಂಡು ರೈತಪರ ನಿಲುವು ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಹೊಸೂರು ಕುಮಾರ್‌, ಎ.ಎಂ.ಮಹೇಶ್‌ ಪ್ರಭು, ನೇತ್ರಾವತಿ, ಮನು ಸೋಮಯ್ಯ, ಪ್ರಸನ್ನ ಎನ್‌. ಗೌಡ, ಎ.ಎಲ್‌.ಕೆಂಪೂಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT