ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್ ಬಾಧಿತರಿಗೆ ಆರೋಗ್ಯ ಅರಿವು ನೀಡಿ: ಮೇಯರ್‌

Last Updated 11 ಫೆಬ್ರುವರಿ 2023, 16:25 IST
ಅಕ್ಷರ ಗಾತ್ರ

ಮೈಸೂರು: ಎಚ್‌ಐವಿ, ಏಡ್ಸ್ ಬಾಧಿತರಿಗೆ ಆಪ್ತಸಮಾಲೋಚನೆ ನೀಡಿ, ಅವರಲ್ಲಿ ಆರೋಗ್ಯ ಸಂರಕ್ಷಣೆಯ ಅರಿವು ಮೂಡಿಸ‌ಬೇಕು ಎಂದು ಮೇಯರ್ ಶಿವಕುಮಾರ್ ಹೇಳಿದರು.

ಇಲ್ಲಿಯ ಬೈರವೇಶ್ವರ ನಗರದಲ್ಲಿ ಏರ್ಪಡಿಸಿದ್ದ ಸಮುದಾಯ ಆಧಾರಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಘಟಕ, ಇ.ಎಸ್.ಐ ಆಸ್ಪತ್ರೆ, ಐಸಿಟಿಸಿ ವಿಭಾಗ, ಮಂಗಳೂರಿನ ದತ್ತೋಪಂತ್ ಥೆಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮಂಡಳಿ, ಮೈಸೂರು ಮೆಡಿಕಲ್ ಕಾಲೇಜು, ಸ್ವಾಮಿ ವಿವೇಕಾನಂದ ನ್ಯೂ ವಿಷನ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.

ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಮಹಮ್ಮದ್ ಸಿರಾಜ್ ಅಹಮದ್, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ 152 ಮಂದಿ ಭಾಗವಹಿಸಿದ್ದರು. ರಕ್ತದೊತ್ತಡ, ಮಧುಮೇಹ-152 ಜನರಿಗೆ ಎಚ್‌ಐವಿ ಪರೀಕ್ಷೆ– 148, ಹಭಾ ಕಾರ್ಡ್–63, ಕೆ.ಆರ್. ಆಸ್ಪತ್ರೆಯ ಚರ್ಮ ರೋಗ ವಿಭಾಗದಿಂದ 52 ಜನರಿಗೆ, ಮೂಳೆ ವಿಭಾಗದಿಂದ 25 ಜನರಿಗೆ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯಿಂದ 70 ಜನರ ತಪಾಸಣೆ, ಋತು ವಾಕ್, ಶ್ರವಣ ಕೇಂದ್ರದಿಂದ-20 ಜನರಿಗೆ ಇ.ಎನ್.ಟಿ ಪರೀಕ್ಷೆ ಮಾಡಿ, ಔಷಧ ನೀಡಿ ಉನ್ನತ ಪರೀಕ್ಷೆಗೆ ಇಎಸ್ಐ ಆಸ್ಪತ್ರೆಗೆ ಬರಲು ವೈದ್ಯರು ಸಲಹೆ ನೀಡಿದರು.

ಡಾ. ಮೊಹಮ್ಮದ್ ಸಿರಾಜ್ ಅಹಮ್ಮದ್, ಡಾ. ವರದರಾಜ್ ವಿ, ರಾಮೇಗೌಡ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜೇಶ್ವರಿ, ಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ್, ಡಾ.ವರದರಾಜು, ಕಾರ್ಮಿಕ ಇಲಾಖೆ ಪ್ರಭಾರ ಪ್ರಾದೇಶಿಕ ನಿರ್ದೇಶಕ ಸತೀಶ್ ಕುಮಾರ್, ವಾರ್ಡ್‌ ಅಧ್ಯಕ್ಷ ರಾಮೇಗೌಡ, ಶ್ರೀಧರ್, ಕೆ. ಟಿ. ಅನಿತಾ, ಡಾ. ರವೀಂದ್ರ ಕುಮಾರ್ ಎನ್. ಡಾ ರಮ್ಯಾ, ಡಾ. ಜ್ಯೋತಿಶ್ರೀ, ಡಾ. ಪೂರ್ಣ ಬಿಂದು ಎಂ.ಬಿ. ನಾಗೇಂದ್ರ ಪ್ರಸಾದ್, ವಿನೋದ, ವಸುಮತಿ, ಉಮ್ಮೆ ಆಸೀಮ್, ಬಿ.ಗೋಪಾಲ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT