ಮೈಸೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ‘ಪ್ರಜಾವಾಣಿ’ ದಿನಪತ್ರಿಕೆ ಸಹಯೋಗದಲ್ಲಿ ‘ಮಾಧ್ಯಮದಲ್ಲಿ ಕನಕಪ್ರಜ್ಞೆ’ ಒಂದು ದಿನದ ವಿಚಾರಸಂಕಿರಣವನ್ನು ಡಿ.30ರಂದು ಇಲ್ಲಿನ ವಿನೋಬಾ ರಸ್ತೆಯ ಕಲಾಮಂದಿರದ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸುವರು. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸುವರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷೆ ಪ್ರೊ.ಮಮತಾ ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ನಂತರ ಗೋಷ್ಠಿಗಳು ನಡೆಯಲಿವೆ. ‘ಸಮಾನತೆ, ಸೌಹಾರ್ದತೆ ಹಾಗೂ ಸೋದರತ್ವ’ ವಿಷಯದ ಕುರಿತು ಸಿ.ಎಸ್. ಪೂರ್ಣಿಮಾ ಮಾತನಾಡುವರು. ರಶ್ಮಿ ಕೋಟಿ, ಮೈಸೂರು ಉಮೇಶ್ ಹಾಗೂ ಕೆ.ಎಸ್. ಬಸವರಾಜು ಪ್ರತಿಕ್ರಿಯಿಸುವರು.

‘ಧರ್ಮ, ಭಕ್ತಿ, ಅನುಭಾವ’ ಕುರಿತು ಎ.ನಾರಾಯಣ ವಿಚಾರ ಮಂಡಿಸಲಿದ್ದು, ಮಂಜುಶ್ರೀ ಎಂ. ಕಡಕೋಳ, ವೆಂಕಟೇಶ್ ಕೆ. ಹಾಗೂ ಅಂಶಿ ಪ್ರಸನ್ನಕುಮಾರ್ ಪ್ರತಿಕ್ರಿಯೆ ನೀಡುವರು.

‘ವರ್ತಮಾನದ ತವಕ, ತಲ್ಲಣಗಳು: ಕನಕದಾಸರು ಮತ್ತು ಮಾಧ್ಯಮ’ ವಿಷಯದ ಬಗ್ಗೆ ಡಿ.ಉಮಾಪತಿ ಮಾತನಾಡುವರು. ಎನ್.ಸಂಧ್ಯಾರಾಣಿ, ಆರ್.ವೀರೇಂದ್ರಪ್ರಸಾದ್ ಮತ್ತು ಸಿ.ಕೆ.ಮಹೇಂದ್ರ ಪ್ರತಿಕ್ರಿಯಿಸುವರು.

ಬಳಿಕ ಎಂ.ಮಹಾಲಿಂಗು ಮತ್ತು ತಂಡದವರು ‘ಕನಕ ಕೀರ್ತನ ಗಾಯನ’ ಪ್ರಸ್ತುತಪಡಿಸುವರು. ಚಾರ್ವಿ ಸತೀಶ್ ಕನಕ ಗಮಕ ವಾಚನ ಕಾರ್ಯಕ್ರಮ ನೀಡುವರು.

ನಂತರ ನಡೆಯುವ ಸಂವಾದದಲ್ಲಿ ಟಿ.ಗುರುರಾಜ್, ಲಕ್ಷ್ಮಣ ಕೊಡಸೆ, ಚೀ.ಜ. ರಾಜೀವ, ಪ್ರಭು ಬಿಸ್ಲಳ್ಳಿ, ಅಹಿಂದ ಜವರಪ್ಪ, ದೀಪಾಬುದ್ಧೆ ಎಚ್.ಜಿ., ಬನಶಂಕರ ಆರಾಧ್ಯ, ಶಭಾನ, ಕೀರ್ತಿ ಎಸ್., ಶ್ರುತಿ ವಿ., ಜಯಕುಮಾರ್ ಎಚ್., ನಾಗರಾಜ್ ನವೀಮನೆ, ಛಾಯಾ ಆರ್.ಪಿ., ದಿವ್ಯಜ್ಯೋತಿ, ಪ್ರೊ.ಕೃ.ಪ. ಗಣೇಶ, ಪ್ರೊ.ಎ.ಎಂ.ಶಿವಸ್ವಾಮಿ, ರಂಗನಾಥ್, ಮಾರುತಿಪ್ರಸನ್ನ ಬಿ.ಎನ್., ಮೋಹನ್, ಮಹೇಶ್, ಮಹೇಶ್ ಚಿಕ್ಕಲ್ಲೂರು, ಪಿ.ಮಣಿ, ನಂಜುಂಡಸ್ವಾಮಿ, ಎಂ.ಎಸ್. ಅನಿತಾ, ಸ್ವರ್ಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಹಾಗೂ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿ ಕರಿಯಪ್ಪ ಎನ್. ಉಪಸ್ಥಿತರಿರುವರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ, ಸಮಾಜಕಾರ್ಯ ಅಧ್ಯಯನ ವಿಭಾಗ ಮತ್ತು ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ಕಾರ್ಯಕ್ರಮಕ್ಕೆ ಸಹಕಾರ ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.