‘ಕಿರುಕುಳ ನೀಡಿದರೆ ಸಹಿಸುವುದಿಲ್ಲ’
‘ಕಪ್ಪಡಿ ಕ್ಷೇತ್ರಕ್ಕೆ ಬರುವ ಭಕ್ತರು ಮಾಂಸಾಹಾರ ತಯಾರಿಸಿಕೊಂಡು ಊಟ ಮಾಡಿದರೆ ಕ್ಷೇತ್ರದಲ್ಲಿ ಪ್ರಾಣಿ ಬಲಿ ಕೊಡಲಾಗುತ್ತದೆ ಎಂದು ಅರ್ಥವಲ್ಲ. ಮಂಟೇಸ್ವಾಮಿ ಪರಂಪರೆಯಲ್ಲಿ ಬಲಿ ಕೊಡುವ ಪದ್ಧತಿ ಇಲ್ಲ. ಇಷ್ಟ ಬಂದ ಆಹಾರ ತಯಾರಿಸಿಕೊಂಡು ಊಟ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಮಂಟೇಸ್ವಾಮಿ ಒಕ್ಕಲಿನ ಭಕ್ತರಿಗೆ ಕಿರುಕುಳ ನೀಡಿದರೆ ಸಹಿಸುವುದಿಲ್ಲ. ಬಹಳ ದೊಡ್ಡದಾಗಿ ನಡೆಯುವಂತಹ ಈ ಜಾತ್ರೆಗೆ ಮಸಿ ಬಳಿಯುವ ಕೆಲಸ ಆಗಬಾರದು’ ಎಂದು ಮಂಟೇಸ್ವಾಮಿ ಪರಂಪರೆ ರಕ್ಷಣೆ ಹೋರಾಟ ಸಮಿತಿ ಅಧ್ಯಕ್ಷ ಉಗ್ರನರಸಿಂಹೇಗೌಡ ಹೇಳಿದರು.