ದೆಹಲಿ ಮುಂಬೈ ಪುಣೆ ಸೇರಿ ಅನೇಕ ಕಡೆಗಳಿಂದ ಬರುವ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದೊಂದು ಸರ್ವ ಧರ್ಮದ ಪುಣ್ಯ ಕ್ಷೇತ್ರವಾಗಿದೆ. ಇಲ್ಲಿಗೆ ಕೇವಲ ಕ್ರೈಸ್ತರಷ್ಟೇ ಅಲ್ಲ ಎಲ್ಲ ಧರ್ಮ ಜಾತಿ ಜನಾಂಗದವರು ಬರುತ್ತಾರೆ. ಭಕ್ತಾದಿಗಳು ಸಂತ ಅಂತೋನಿ ಅವರಲ್ಲಿ ಪ್ರಾರ್ಥಿಸಿ ಕಷ್ಟಗಳು ಪರಿಹಾರ ಮಾಡಿಕೊಳ್ಳುತ್ತಾರೆ
-ಡೇವಿಡ್ ಸಗಾಯರಾಜ್ ಧರ್ಮಗುರು ಡೋರ್ನಹಳ್ಳಿ ಚರ್ಚ್
ಪ್ರವೀಣ್ ಪೇದ್ರು
ಆಧ್ಯಾತ್ಮಿಕವಾದ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಜಾತ್ರೋತ್ಸವವು ಧರ್ಮ ಜಾತಿ ಭಾಷೆಗಳ ಭೇದ ಭಾವ ಇಲ್ಲದೇ ನಡೆಯುತ್ತದೆ. ಕಷ್ಟ ಹೇಳಿಕೊಂಡು ಬರುವ ಭಕ್ತಾದಿಗಳಿಗೆ ಒಳ್ಳೆಯದಾಗಿದೆ. ಜೂನ್ 5ರಿಂದ ವಿಶೇಷವಾದ ಪ್ರಾರ್ಥನೆ ಬಲಿ ಪೂಜೆ ನಡೆಯುತ್ತಿದೆ