ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈತ್ರಿ ಅಭ್ಯರ್ಥಿ ‍ಪರ ಶ್ರೀಕಂಠೇಗೌಡ ಪ್ರಚಾರ

Published 25 ಮೇ 2024, 4:37 IST
Last Updated 25 ಮೇ 2024, 4:37 IST
ಅಕ್ಷರ ಗಾತ್ರ

ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಮತಯಾಚಿಸಿ ಅವರು ಮಾತನಾಡಿದರು.

‘ನಾನು ಮೂಲತಃ ಶಿಕ್ಷಕನಾಗಿದ್ದರಿಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಎರಡು ವರ್ಷಗಳಿಂದ ತಯಾರಿ ಮಾಡಿಕೊಂಡು ಬಂದಿದ್ದೆ. ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವರು ಹೊಸ ಮುಖ ಬೇಕು ಎಂದು ಹಠ ಹಿಡಿದ ಹಿನ್ನೆಲೆಯಲ್ಲಿ ವಿವೇಕಾನಂದ ಅವರಿಗೆ ಅವಕಾಶ ನೀಡಿದೆ’ ಎಂದರು.

‘ಈ ಹಿಂದೆ ಉಪ ಸಭಾಪತಿಯಾಗಲು ಅವಕಾಶ ಇತ್ತು, 2-3 ಬಾರಿಯೂ ತಪ್ಪಿ ಹೋಯಿತು. ಪಕ್ಷ ನನಗೆ ಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದೆ. ಇದರಿಂದ ನನಗೆ ಬೆಸರವಾಗಿಲ್ಲ, ಕೆಲಸ ಮಾಡಲು ಅಧಿಕಾರವೇ ಬೇಕಾಗಿಲ್ಲ’ ಎಂದು ಹೇಳಿದರು.

‘ಜೆಡಿಎಸ್ ಮತ್ತು ಬಿಜೆಪಿ ಸದಾ ಶಿಕ್ಷಕರ, ಉಪನ್ಯಾಸಕರ ಪರವಾಗಿ ಕೆಲಸ ಮಾಡಿದೆ, ವಿವೇಕಾನಂದ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ಪ್ರಾಂಶುಪಾಲ ಬಿ.ಟಿ.ವಿಜಯ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಮಿರ್ಲೆ ಧನಂಜಯ್, ಕೃಷ್ಣಶೆಟ್ಟಿ, ಉಪನ್ಯಾಸಕರಾದ ಪ್ರಶಾಂತ್, ಕೆ.ಆರ್.ಪ್ರತಿಮಾ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT