ಎಚ್.ಡಿ.ಕೋಟೆ: ಜಮೀನಿನ ವಿಚಾರವಾಗಿ ಎರಡು ಗುಂಪುಗಳ ನಡುವೆ ಸೋಮವಾರ ಗಲಾಟೆ ನಡೆದು ಗಾಯಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದ್ದಾರೆ.

ಈ ಸಂಬಂಧ ಎರಡೂ ಕಡೆಯಿಂದಲೂ ದೂರು, ಪ್ರತಿ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

‘ನನ್ನ ತಾತ ಸೈಯಾದ್ ಅಹಮ್ಮದ್ ಅವರ ಹೆಸರಿನಲ್ಲಿರುವ 4 ಎಕರೆ ಜಮೀನಿನಲ್ಲಿದ್ದ ಸಂದರ್ಭದಲ್ಲಿ ನಾಗಮೂರ್ತಿ ಹಾಗೂ ಜಿ.ಜಿ. ಕಾಲೊನಿ ರವಿ ನನ್ನ ತಾಯಿ ಮತ್ತು ನನ್ನ ಚಿಕ್ಕಮ್ಮನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ತಾಲ್ಲೂಕಿನ ಪಡುಕೋಟೆ ಕಾವಲ್ ಶರೀಫ್ ಕಾಲೊನಿ ನಿವಾಸಿ ನಯಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಪ್ರತಿ ದೂರು:

‘ಮನೆಯಲ್ಲಿರುವ ಏಕಾಏಕಿ ನಯಾಜ್, ಅಪ್ಸರ್, ಅಜ್ಜಲ್, ಇಮ್ರಾನ್, ಇಮ್ಮಿಯಾಜ್, ಸೈಯಾದ್ ಮಲ್ಬುಲ್, ಅಮೀನಾ ಬಿ, ಶಕೀರಾ, ಇದಾಯಿತ್, ತೌಸಿಫ್, ಅಬ್ದುಲ್ ಸೈಯಾದ್, ಆಧೀಲ್ ಅವರು ಗುಂಪುಕಟ್ಟಿಕೊಂಡು ಬಂದು ನಮಗೆ ಸೇರಿದ ಜಮೀನನ್ನು ನಮಗೆ ಬಿಟ್ಟುಕೊಡು ಇಲ್ಲದಿದ್ದರೆ ನಾವೆಲ್ಲರೂ ಸೇರಿ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದರು’ ಎಂದು ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೈಸೂರು ತಾಲ್ಲೂಕಿನ ಬೋಗಾದಿ ನಾಗಮೂರ್ತಿ ಅವರು ದೂರು ನೀಡಿದ್ದಾರೆ.

‘ಜಮೀನು ನನಗೆ ಸೇರಿದ್ದು, ನಾನ್ಯಾಕೆ ಬಿಟ್ಟುಕೊಡಲಿ ಎಂದು ಹೇಳಿದಾಗ ಗಲಾಟೆಯ ಸಮಯದಲ್ಲಿ ಜೇಬಿನಲಿದ್ದ ₹72 ಸಾವಿರವನ್ನು ಕಿತ್ತುಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.