ವಯೋವೃದ್ಧರು ಇಲ್ಲಿನ ಪಾದಚಾರಿ ಮೇಲ್ಸೇತುವೆ ಹತ್ತಿ ನಿಲ್ದಾಣದ ಹೊರಗೆ ಹೋಗುವುದು ಕಷ್ಟವಾಗುತ್ತದೆ. ಲಿಫ್ಟ್ ಇದ್ದರೆ ಅನುಕೂಲವಾಗುತ್ತದೆ
ಸಿದ್ದರಾಮೇಗೌಡ ಆದಿಶಕ್ತಿ ಬಡಾವಣೆ ನಿವಾಸಿ ಕೆ.ಆರ್.ನಗರ
ವೃದ್ಧರು ಅಂಗವಿಕಲರಿಗಾಗಿ ರೈಲು ನಿಲ್ದಾಣದಲ್ಲಿ ವೀಲ್ ಚೇರ್ ಕಾದಿರಿಸಿರುತ್ತೇವೆ ಕೇಳಿದರೆ ಒದಗಿಸಲಾಗುತ್ತದೆ.
ಯೋಗೇಂದ್ರ ಕುಮಾರ್ ಸಿಂಗ್ ಸ್ಟೇಷನ್ ಮಾಷ್ಟರ್ ಕೆ.ಆರ್.ನಗರ.
‘ಪಾರ್ಕಿಂಗ್ ವ್ಯವಸ್ಥೆ ಮಾಡಿ’
‘ಈ ಹಿಂದೆ ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು ಕೆಲ ವರ್ಷಗಳ ಹಿಂದೆ ರದ್ದು ಪಡಿಸಿದ್ದಾರೆ. ರೈಲು ನಿಲ್ದಾಣಕ್ಕೆ ಬರುವ ಬಹುತೇಕರು ದ್ವಿಚಕ್ರ ವಾಹನದಲ್ಲಿಯೇ ಬರುತ್ತಾರೆ. ಮತ್ತೆ ಪಾರ್ಕಿಂಗ್ ವ್ಯವಸ್ಥೆ ಆರಂಭಿಸಬೇಕು’ ಎಂದು ರೈಲು ನಿಲ್ದಾಣ ಬಳಿಯ ಅಂಗಡಿ ಮಾಲೀಕ ಉದಯಕುಮಾರ್ ಒತ್ತಾಯಿಸಿದರು. ‘ಪ್ರಯಾಣಿಕರು ವಾಹನ ನಿಲ್ಲಿಸುವುದು ಕಷ್ಟವಾಗಿದೆ. ಅವರ ಕಷ್ಟ ನೋಡಿಲಿಕ್ಕೆ ಆಗದೇ ಮಾನವೀಯ ದೃಷ್ಟಿಯಿಂದ ಸಂಜೆ ತೆಗೆದುಕೊಂಡು ಹೋಗುವವರಿದ್ದರೆ ಕೆಲವರ ವಾಹನವನ್ನು ನನ್ನ ಚಿಕ್ಕ ಅಂಗಡಿ ಮುಂದೆ ನಿಲ್ಲಿಸಿಕೊಳ್ಳುತ್ತೇನೆ’ ಎಂದರು.