ಹುಣಸೂರು: ಸ್ವತಂತ್ರ ಭಾರತದ ಹಿಂದಿನಿಂದಲೂ ಕ್ರೈಸ್ತ ಧರ್ಮ ಪ್ರಚಾರದಲ್ಲಿದ್ದ ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಪ್ರತಿಭಟಿಸಿದ ಆದಿವಾಸಿ ಸಮುದಾಯದ ನಾಯಕ ಬಿರ್ಸಾ ಮುಂಡ ಇಂದಿನ ಗಿರಿಜನ ಸಮಾಜದ ಯುವಕರಿಗೆ ಮಾದರಿಯಾಗಬೇಕಾಗಿದೆ ಎಂದು ರಾವಂದೂರಿನ ಮೋಕ್ಷಪತಿ ಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಕಪ್ಪನಕಟ್ಟೆ ಹಾಡಿಯಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ಗಿರಿಜನ ಸಮಾಜದ ಯುವಪೀಳಿಗೆ ಅನ್ಯ ಧರ್ಮಕ್ಕೆ ಮತಾಂತರಗೊಂಡು ತಾನು ಹುಟ್ಟಿದ ಪರಂಪರೆಯನ್ನು ಅರ್ಧಕ್ಕೆ ಕತ್ತರಿಸುವ ಕೆಲಸದಲ್ಲಿ ತೊಡಗಿರುವುದು ದುರಂತ. ಪ್ರತಿಯೊಬ್ಬರ ಹುಟ್ಟಿಗೂ ಕಾರಣವಿರಲಿದೆ, ಅದೇ ರೀತಿ ಗಿರಿಜನ ಸಮುದಾಯದ ಪ್ರತಿಯೊಬ್ಬರಿಗೂ ಒಂದು ಪರಂಪರೆ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಿರಿಜನರ ಮುಖಂಡ ಬಿರ್ಸಾ ಮುಂಡ ಮತಾಂತರಗೊಳಿಸುವ ಮಿಷನರಿಗಳಿಗೆ ತಕ್ಕ ಪಾಠ ಕಲಿಸಿ ಗಿರಿಜನ ಸಮಾಜ ಉಳಿವಿಗೆ ಅಪಾರ ಕೊಡುಗೆ ನೀಡಿದ್ದರು ಎಂದರು.

ಇಂದು ಗಿರಿಜನ ಸಮುದಾಯದ ಉಳಿವಿಗೆ ಸರ್ಕಾರ ಹತ್ತು ಹಲವು ಯೋಜನೆ ರೂಪಿಸಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಮೀಸಲಾತಿ ಜಾರಿಗೊಳಿಸಿ ಸಾಮಾಜಿಕ ಭದ್ರತೆ ನೀಡಿದ್ದರೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಟ್ಟು ಅನ್ಯ ಧರ್ಮೀಯರು ನೀಡುವ ಕ್ಷುಲ್ಲಕ ಆಮಿಷಕ್ಕೆ ಬಲಿಯಾಗುವುದು ಸರಿಯಲ್ಲ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅರುಣ್ ಚವ್ಹಾಣ್, ವನವಾಸಿ ಕಲ್ಯಾಣ ಸಂಸ್ಥೆ ಮುಖಂಡರು, ಕಪ್ಪನಕಟ್ಟೆ ಹಾಡಿ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.