ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದ ದೀರ್ಘಾಯುಷಿ ಜಿರಾಫೆ ‘ಯುವರಾಜ’ ವೃದ್ಧಾಪ್ಯದ ಕಾರಣ ಬುಧವಾರ ಬೆಳಿಗ್ಗೆ 10.30ಕ್ಕೆ ಮೃತಪಟ್ಟಿದೆ.

1987ರಲ್ಲಿ ಜರ್ಮನಿ ಮೃಗಾಲಯದಿಂದ ತರಲಾಗಿದ್ದ ಹೆನ್ರಿ ಮತ್ತು ಹನಿ ಜಿರಾಫೆಗಳಿಗೆ 9ನೇ ಮರಿಯಾಗಿ 2001ರ ಡಿ.7ರಂದು ‘ಯುವರಾಜ’ ಜನಿಸಿದ್ದನು.

‘ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಜೊತೆ ಒಡಹುಟ್ಟಿದ್ದ ಯುವರಾಜ ಮೃಗಾಲಯದಲ್ಲಿ ದೀರ್ಘಕಾಲ ಬದುಕಿದ್ದ. ಕಪ್ಪುಬಣ್ಣದ ಸುಂದರ ಕಾಯವನ್ನು ಹೊಂದಿತ್ತು. ಮೃಗಾಲಯಕ್ಕೆ ತುಂಬಲಾರದ ನಷ್ಟವಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ಸಂತಾಪ ಸೂಚಿಸಿದ್ದಾರೆ.

ಅರಣ್ಯ ಪರಿಸರದಲ್ಲಿ ಸಾಮಾನ್ಯವಾಗಿ ಗಂಡು ಜಿರಾಫೆಗಳು 15– 20 ವರ್ಷ ಹಾಗೂ ಮೃಗಾಲಯದಲ್ಲಿ 10ರಿಂದ 15 ಮಾತ್ರ ಬದುಕುತ್ತವೆ. ‘ಯುವರಾಜ’ನ 25 ವರ್ಷದ ಹುಟ್ಟುಹಬ್ಬವನ್ನು 2025ರ ಡಿ.7ರಂದು ಅದ್ದೂರಿಯಾಗಿ ಮೃಗಾಲಯವು ಆಚರಿಸಿತ್ತು. ಹುಲ್ಲು, ಹಣ್ಣು, ತರಕಾರಿ–ಕಾಳು ಬಳಸಿ ವಿಶೇಷವಾಗಿ ತಯಾರಿಸಿದ ಕೇಕ್ ಅನ್ನು ಆರೈಕೆ ಮಾಡುವ ರಘು, ವಿಘ್ನೇಶ, ಸಚಿನ್ ತಿನ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.