ಮೈಸೂರು: ಇಲ್ಲಿನ ಗಾನಭಾರತೀಯಲ್ಲಿ ಗುರು ಪುಟ್ಟರಾಜ ಗವಾಯಿ ಸಂಗೀತ ಸಭಾ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಬಲಾ ವಾದಕ ಹೇಮಂತ್ ಜೋಷಿ ಅವರಿಗೆ ‘ಪುಟ್ಟಶ್ರೀ ಸಮ್ಮಾನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಲ್ಲಿ ಡಾ.ಪುಟ್ಟರಾಜ ಗವಾಯಿ ಅವರ 8ನೇ ಪುಣ್ಯಸ್ಮರಣೆ ಅಂಗವಾಗಿ ‘ಭೈರವದಿಂದ ಭೈರವಿ, ಪುಟ್ಟಶ್ರೀ ಸಮ್ಮಾನ, ಸಂಗೀತೋತ್ಸವ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಏರ್ಪಟ್ಟಾಗಿತ್ತು.

ಪ್ರಹ್ಲಾದ ಜೆ.ಕಟ್ಟಿಮನಿ ಅವರ ‘ಶ್ರೀ ರೇಣುಕಾ ಕಾವ್ಯಮಂಜರಿ’ ಕೃತಿಯನ್ನು ಸಂಗೀತ ವಿಮರ್ಶಕ ಪ್ರೊ.ವಿ.ಅರವಿಂದ ಹೆಬ್ಬಾರ ಬಿಡುಗಡೆ ಮಾಡಿದರು.

ವೈ.ಎಸ್.ಪುನಿತ್ ಅವರು ರಚಿಸಿರುವ ವಿವಿಧ ಸಂಗೀತ ವಾದ್ಯ ನುಡಿಸುತ್ತಿರುವ ಪುಟ್ಟರಾಜ ಗವಾಯಿ ಅವರ ಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಇದೇ ವೇಳೆ ಉದ್ಘಾಟಿಸಲಾಯಿತು.

ಕರ್ನಾಟಕ ಶಾಸ್ತ್ರೀಯ ಸಂಗೀತ, ಕೀರ್ತನೆ, ವಚನ ಗಾಯನವನ್ನು ಗಾಯತ್ರಿ ಶ್ರೀಧರ್ ಪ್ರಸ್ತುತಪಡಿಸಿದರೆ, ಅನಿರುದ್ಧ್ ಐತಾಳ್, ಸಂಧ್ಯಾ ಭಟ್, ಶ್ರೀಮತಿದೇವಿ, ಸುಮಿತ್ರಾ ಕಾಡದೇವರಮಠ ಅವರು ಸುಶ್ರಾವ್ಯವಾಗಿ ವಿವಿಧ ಹಾಡುಗಳನ್ನು ಹಾಡಿದರು. ವಿದ್ವಾನ್ ಎನ್.ಶ್ರೀನಾಥ್ ಕರ್ನಾಟಕ ಸಂಗೀತ ಪ್ರಸ್ತುತಪಡಿಸಿದರು. ಎಸ್‍ಜಿಪಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಸಮೂಹ ತಬಲಾ ವಾದನ ನಡೆಸಿಕೊಟ್ಟರು. ಹೇಮಂತ್ ಜೋಷಿ ಅವರಿಂದ ತಬಲಾ ವಾದನ ಕಾರ್ಯಕ್ರಮವೂ ನಡೆಯಿತು.

ಇದಕ್ಕೂ ಮುನ್ನ ಇಡೀ ಕಾರ್ಯಕ್ರಮವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಪ್ರತಿಭಾ ಎಂಟರ್ ಪ್ರೈಸಸ್ ಮಾಲೀಕ ಎಂ.ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.