ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಜನ್ಮದಿನ: ಅಭಿಮಾನಿಗಳ ಸಡಗರ

ನಗರದಲ್ಲಿ ರಾಜ್‌ಕುಮಾರ್‌ ಪ್ರತಿಮೆಗಳಿಗೆ ಮಾಲಾರ್ಪಣೆ; ವಿವಿಧ ಸಂಘಟನೆಗಳಿಂದ ಸಿಹಿ ವಿತರಣೆ
Published 24 ಏಪ್ರಿಲ್ 2024, 16:23 IST
Last Updated 24 ಏಪ್ರಿಲ್ 2024, 16:23 IST
ಅಕ್ಷರ ಗಾತ್ರ

ಮೈಸೂರು: ನಗರದೆಲ್ಲೆಡೆ ಬುಧವಾರ ವರನಟ ರಾಜ್‌ಕುಮಾರ್ ಅವರ 96ನೇ ಜನ್ಮದಿನವನ್ನು ವಿವಿಧ ಸಂಘಟನೆಗಳು, ಸಂಘ– ಸಂಸ್ಥೆಗಳ ಸದಸ್ಯರು ಹಾಗೂ ಅಭಿಮಾನಿಗಳು ಸಡಗರದಿಂದ ಆಚರಿಸಿದರು.

ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿಯಿರುವ ಡಾ.ರಾಜ್ ಉದ್ಯಾನದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಮೇಯರ್‌ ಮುತ್ತಣ್ಣ ಪ್ರೇರಣೆ: ‘ಮೈಸೂರು ಪಾಲಿಕೆಯ ಮೇಯರ್‌ ಆಗಲು 1969ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ಅವರ ಮೇಯರ್ ಮುತ್ತಣ್ಣ ಚಿತ್ರವೇ ಪ್ರೇರಣೆಯಾಗಿದೆ. ಜನ ಸೇವೆಗೆ ಆ ಚಿತ್ರ ಸ್ಫೂರ್ತಿಯಾಯಿತು’ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.

ವಸ್ತುಪ್ರದರ್ಶನದ ಆವರಣದಲ್ಲಿರುವ ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿ, ‘ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ರಾಜಣ್ಣ ಅಭಿನಯಿಸದ ಪಾತ್ರವಿಲ್ಲ. ಇಡೀ ಭಾರತ ಚಿತ್ರರಂಗವೇ ರಾಜ್ ಚಿತ್ರ ಬಿಡುಗಡೆಯಾದಾಗ ತಿರುಗಿ ನೋಡುತ್ತಿತ್ತು. ರಾಜ್ ಅವರ ನೂರಾರು ಚಿತ್ರಗಳು ಬೇರೆ ಭಾಷೆಗಳಲ್ಲೂ ರಿಮೇಕ್ ಆಗಿ ಭರ್ಜರಿ ಯಶಸ್ಸು ಗಳಿಸಿವೆ’ ಎಂದರು.

‘ಗಂಧದ ಗುಡಿ ಚಿತ್ರವು ಅರಣ್ಯ– ಪರಿಸರ ಕಾಪಾಡಬೇಕೆಂಬ ಸಂದೇಶವನ್ನು 50 ವರ್ಷಗಳ ಹಿಂದೆಯೇ ಸಾರಿತ್ತು. ಯಾವುದೇ ಮಾದರಿಯ ಪಾತ್ರಕ್ಕೂ ಜೀವ ತುಂಬುತ್ತಿದ್ದ ಅವರು, ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿನಿಮಾಗಳ ಮೂಲಕ ಮೌಲ್ಯ, ನೈತಿಕತೆ, ಕನ್ನಡತನ ಕಲಿಸಿದ ಗುರು’ ಎಂದು ಬಣ್ಣಿಸಿದರು.

‘ರಾಜ್ ಅವರ ಚಿತ್ರಗಳನ್ನು ನೋಡಬೇಕು. ಅಲ್ಲಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಜಿ. ಗೌಡ, ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ನಾಗೇಶ್, ವರುಣ ಮಹದೇವ್, ಕೃಷ್ಣಪ್ಪ, ಲೋಕೇಶ್, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಜು, ಅಭಿಮಾನಿಗಳಾದ ಶಿವು ಕೆ.ಜಿ. ಕೊಪ್ಪಲು, ಸೋಮಣ್ಣ, ಗಿರೀಶ್, ರಾಮು ಧನಂಜಯ್ ಶಿವರಾಜ್ ಹಾಜರಿದ್ದರು.

ಜೀವನ ಮೌಲ್ಯಗಳೇ ತುಂಬಿದ್ದವು: ‘ರಾಜ್ ಚಿತ್ರಗಳಲ್ಲಿ ಜೀವನ ಮೌಲ್ಯಗಳು ತುಂಬಿದ್ದವು. ಅವರ ಬಗ್ಗೆ ಮಾತನಾಡುವುದೆಂದರೆ ಕನ್ನಡ ಬಗ್ಗೆಯೇ ಮಾತನಾಡುವುದಾಗಿದೆ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಆರ್‌. ಕೌಟಿಲ್ಯ ಹೇಳಿದರು.

ಕೋಟೆ ಆಂಜನೇಯ ಸ್ವಾಮಿ ಸಮೀಪದ ರಾಜ್‌ಕುಮಾರ್ ಉದ್ಯಾನದಲ್ಲಿ ‘ವಿಶ್ವಮಾನವ ಸೇವಾ ಸಮಿತಿ’ಯಿಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ‘ರಾಜ್‌ ಚಿತ್ರಗಳು ಕುಟುಂಬವೆಲ್ಲ ಒಟ್ಟಾಗಿ ನೋಡಬಹುದಿತ್ತು. ಕನ್ನಡವನ್ನು ಅವರ ಕಂಠದಿಂದ ಕೇಳುವುದೇ ಚೆಂದ. ಕನ್ನಡತನವನ್ನು ಪಾತ್ರಗಳಲ್ಲಿ ಅಭಿವ್ಯಕ್ತಿಸಿದ್ದರು. ನುಡಿಯ ಉಚ್ಚಾರಣೆ ಹೇಗಿರಬೇಕೆಂದು ಎಲ್ಲರಿಗೂ ಸಿನಿಮಾದ ಮೂಲಕವೇ ಹೇಳಿಕೊಟ್ಟರು’ ಎಂದರು.

ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರ ರಾವ್, ಅಧ್ಯಕ್ಷ ಸೇತುರಾಮ್, ಉಪಾಧ್ಯಕ್ಷ ರಮೇಶ್, ಕಾರ್ಯಾಧ್ಯಕ್ಷ ಸುಚೀಂದ್ರ, ನಜರ್‌ಬಾದ್ ನಟರಾಜ್, ನಾಗಶ್ರೀ, ವಿದ್ಯಾ, ಚಕ್ರಪಾಣಿ ಹಾಜರಿದ್ದರು.

ಕೆ.ಆರ್‌.ವೃತ್ತದಲ್ಲಿ ‘ಡಾ.ರಾಜ್‌ಕುಮಾರ್ ಕನ್ನಡ ಸೇನೆ’ ‘ಮೈಸೂರು ಕನ್ನಡ ವೇದಿಕೆ’ ಸಹಯೋಗದಲ್ಲಿ ನಡೆದ ಜನ್ಮದಿನಾಚರಣೆಯಲ್ಲಿ ರಾಜ್ ಸಂಬಂಧಿ ಚಿತ್ರ ನಿರ್ಮಾಪಕ ಎಸ್.ಎ.ಶ್ರೀನಿವಾಸ ಅವರು ರಾಜ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಸಿದ್ದಪ್ಪ ಮಹೇಶ್‌ ಗೌಡ ಎಸ್. ಬಾಲಕೃಷ್ಣ ಎಸ್‌.ಜಯಪ್ರಕಾಶ್ ಮಹದೇವಸ್ವಾಮಿ ಎಲ್‌ಐಸಿ ದೇವರಾಜ್ ರಾಜಪ್ಪ ಪ್ರಸನ್ನ ಉಮೇಶ್‌ ನಾಗರಾಜ್ ಬೀರೇಗೌಡ ಗಿರೀಶ್ ಚೇತನ್‌ ಎಸ್‌.ರಮೇಶ್ ಪಾಲ್ಗೊಂಡಿದ್ದರು

ಕುಪ್ಪಣ್ಣ ಪಾರ್ಕ್‌ನ ರಾಜ್‌ ಪ್ರತಿಮೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಉಪಾಧ್ಯಕ್ಷ ರಾಜಶೇಖರ ಕದಂಬ ಗೌರವ ಸಲ್ಲಿಸಿದರು
ಕುಪ್ಪಣ್ಣ ಪಾರ್ಕ್‌ನ ರಾಜ್‌ ಪ್ರತಿಮೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಉಪಾಧ್ಯಕ್ಷ ರಾಜಶೇಖರ ಕದಂಬ ಗೌರವ ಸಲ್ಲಿಸಿದರು
ಮೈಸೂರು ಹೋಟೆಲ್‌ ಮಾಲೀಕರ ಸಂಘದಿಂದ ರಾಜ್ ಉದ್ಯಾನದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮಂತಕುಮಾರ್ ಎ.ಸಿ.ರವಿ ಟಿ.ಆರ್.ಸುರೇಶ ಮಹದೇವ ಕೆ.ಎಸ್.ಅರುಣ್ ಹಾಜರಿದ್ದರು
ಮೈಸೂರು ಹೋಟೆಲ್‌ ಮಾಲೀಕರ ಸಂಘದಿಂದ ರಾಜ್ ಉದ್ಯಾನದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಕಾರ್ಯಕಾರಿ ಸಮಿತಿ ಸದಸ್ಯರಾದ ಹೇಮಂತಕುಮಾರ್ ಎ.ಸಿ.ರವಿ ಟಿ.ಆರ್.ಸುರೇಶ ಮಹದೇವ ಕೆ.ಎಸ್.ಅರುಣ್ ಹಾಜರಿದ್ದರು
ಮೈಸೂರು ನಗರ ಕನ್ನಡ ಪರ ಸಂಘಟನೆಯ ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ರಾಜ್‌ ಪ್ರತಿಮೆಗೆ ಹೂವಿನ ಹಾಕಿ ಗೌರವ ಸಲ್ಲಿಸಿದರು. ವೇದಿಕೆ ಅಧ್ಯಕ್ಷ ಮಂಜುನಾಥ್ ಎಂ.ರಾಮೇಗೌಡ ಹನುಮಂತೇಗೌಡ ಬಾಬು ಮೋಹನ್‌ ಕುಮಾರ ಯೋಗೇಶ್ ಸರ್ದಾರ್ ಮಹೇಶ್ ರಂಗಪ್ಪಗೌಡ ಭಾಗವಹಿಸಿದ್ದರು

ವಸ್ತುಪ್ರದರ್ಶನದ ಆವರಣದಲ್ಲಿರುವ ರಾಜ್ ಪ್ರತಿಮೆಗೆ ಅಯೂಬ್ ಖಾನ್ ಮಾಲಾರ್ಪಣೆ ಮಾಡಿದರು
ವಸ್ತುಪ್ರದರ್ಶನದ ಆವರಣದಲ್ಲಿರುವ ರಾಜ್ ಪ್ರತಿಮೆಗೆ ಅಯೂಬ್ ಖಾನ್ ಮಾಲಾರ್ಪಣೆ ಮಾಡಿದರು
ರಾಜ್‌ ಪ್ರತಿಮೆಗೆ ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಮಾಲಾರ್ಪಣೆ ಮಾಡಿದರು. ಜೆಡಿಎಸ್‌ ಮುಖಂಡ ದೊಡ್ಡಕಾನ್ಯ ಮಹೇಶ್ ಸಾಹುಕಾರ್ ಹುಂಡಿ ಗೋಪಾಲಗೌಡ ರಾಚಪ್ಪ ಹಾಜರಿದ್ದರು
ರಾಜ್‌ ಪ್ರತಿಮೆಗೆ ರಂಗಭೂಮಿ ಕಲಾವಿದ ಹುಯಿಲಾಳು ರಾಮಸ್ವಾಮಿ ಮಾಲಾರ್ಪಣೆ ಮಾಡಿದರು. ಜೆಡಿಎಸ್‌ ಮುಖಂಡ ದೊಡ್ಡಕಾನ್ಯ ಮಹೇಶ್ ಸಾಹುಕಾರ್ ಹುಂಡಿ ಗೋಪಾಲಗೌಡ ರಾಚಪ್ಪ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT