ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗ ನೀಡಲು ಮನವಿ: ನಟ ಅನಿರುದ್ಧ

Published 30 ಡಿಸೆಂಬರ್ 2023, 19:48 IST
Last Updated 30 ಡಿಸೆಂಬರ್ 2023, 19:48 IST
ಅಕ್ಷರ ಗಾತ್ರ

ಮೈಸೂರು: ‘ಬೆಂಗಳೂರಿನ ಅಭಿಮಾನ್‌ ಸ್ಟುಡಿಯೊದಲ್ಲಿ ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕಾಗಿ 10 ಗುಂಟೆ ಜಾಗ ನೀಡುವಂತೆ ಬಾಲಕೃಷ್ಣ ಅವರ ಕುಟುಂಬದವರಲ್ಲಿ ಮನವಿ ಮಾಡಿದ್ದೇವೆ’ ಎಂದು ಚಲನಚಿತ್ರ ನಟ ಹಾಗೂ ವಿಷ್ಣುವರ್ಧನ್‌ ಅಳಿಯ ಅನಿರುದ್ಧ ತಿಳಿಸಿದರು.

ತಾಲ್ಲೂಕಿನ ಉದ್ಬೂರು ಗೇಟ್ ಸಮೀಪದಲ್ಲಿರುವ ವಿಷ್ಣುವರ್ಧನ್‌ ಸ್ಮಾರಕದಲ್ಲಿ ಶನಿವಾರ ನಡೆದ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಅಭಿಮಾನಿಗಳ ಆಸೆ ಈಡೇರಿಸಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ಸರ್ಕಾರವು ಈಗಾಗಲೇ ಸ್ಮಾರಕ ನಿರ್ಮಾಣ ಮಾಡಿರುವುದರಿಂದ ಮತ್ತೊಂದು ಸ್ಮಾರಕಕ್ಕೆ ಹಣ ವಿನಿಯೋಗಿಸಲಾಗುವುದಿಲ್ಲ. ಹೀಗಾಗಿ, ದುಡ್ಡಿನ ಅಪೇಕ್ಷೆ  ಇಲ್ಲದೇ ಕಲಾ ದಿಗ್ಗಜನಿಗೆ ಗೌರವಾರ್ಥವಾಗಿ ಜಾಗ ಬಿಟ್ಟು ಕೊಡುವಂತೆ ಬಾಲಣ್ಣ ಕುಟುಂಬದವರನ್ನು ವೈಯಕ್ತಿಕವಾಗಿ ಕೋರಿರುವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT