ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು |ಜಿಂಕೆ ಭೇಟೆ: ಇಬ್ಬರ ಬಂಧನ

Published 2 ಮೇ 2024, 15:27 IST
Last Updated 2 ಮೇ 2024, 15:27 IST
ಅಕ್ಷರ ಗಾತ್ರ

ಹುಣಸೂರು: ‘ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಚುವಿನಹಳ್ಳಿ ವಲಯ ಸಣ್ಣಗದ್ದೆ ಗಸ್ತು ತಟ್ಟಿಹಳ್ಳಿ ಪಾರೆ ಅರಣ್ಯ ಪ್ರದೇಶದಲ್ಲಿ ಉರುಳು ಹಾಕಿ ಜಿಂಕೆಯನ್ನು ಬೇಟೆ ಮಾಡಿದ 2 ಆರೋಪಿಗಳನ್ನು ಮಾಂಸದ ಸಮೇತ ಬಂಧಿಸುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ’ ಎಂದು ಎಸಿಎಫ್ ದಯಾನಂದ್ ತಿಳಿಸಿದ್ದಾರೆ.

ಘಟನೆ ವಿವರ: ಮೇ 1ರ ಬುಧವಾರ ಮಧ್ಯಾಹ್ನ ಆರ್.ಎಫ್.ಒ ಪ್ರಮೋದ್ ಮತ್ತು ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ 5 ಆರೋಪಿಗಳ ತಂಡವೊಂದು ಅರಣ್ಯದಲ್ಲಿ ಅಕ್ರಮವಾಗಿ ಭೇಟೆ ಮಾಡಿದ ಜಿಂಕೆ ಮಾಂಸದೊಂದಿಗೆ ತೆರಳುತ್ತಿದ್ದರು. ಇದನ್ನು ಗಮನಿಸಿದ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಸಿದೆ. ಐವರು ಆರೋಪಿಗಳಲ್ಲಿ ಇಬ್ಬರು ವಶಕ್ಕೆ ಸಿಕ್ಕಿದ್ದು, ಮೂವರು ತಪ್ಪಿಸಿಕೊಂಡಿದ್ದಾರೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಗಳು ಹುಣಸೂರು ತಾಲ್ಲೂಕಿನ ಕೊಳವಿಗೆ ಹಾಡಿಯ ದಿನೇಶ್, ಬಿಲ್ಲೇನಹೊಸಹಳ್ಳಿ ಹಾಡಿಯ ರಾಮು ಎಂದು ತಿಳಿದು ಬಂದಿದೆ. ಉಳಿದ ಮೂವರು ಆರೋಪಿಗಳಾದ ಗಣೇಶ, ವಿಶ್ವ ಮತ್ತು ಕುಮಾರ ಎಂಬುವವರ ಪತ್ತೆಗೆ ಇಲಾಖೆ ಕಾರ್ಯಾಚರಣೆ ನಡೆಸಿದೆ.

ಆರೋಪಿಗಳಿಂದ 40 ಕೆ.ಜಿ ಮಾಂಸ ಮತ್ತು ಮಾರಕಾಸ್ತ್ರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT