ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ: ದೈನಂದಿನ ಕೆಲಸಕ್ಕೆ ಅನುಮತಿ

Published 4 ಆಗಸ್ಟ್ 2024, 16:19 IST
Last Updated 4 ಆಗಸ್ಟ್ 2024, 16:19 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ದೈನಂದಿನ ಸೇವೆಗಳನ್ನು ಮುಂದುವರಿಸಲು ಸರ್ಕಾರವು ಅನುಮತಿ ನೀಡಿದೆ.

ಕಂದಾಯ ಪಾವತಿ, ಕಟ್ಟಡ ವಿನ್ಯಾಸ ನಕ್ಷೆ ಅನುಮೋದನೆ, ನ್ಯಾಯಾಲಯಗಳ ಪ್ರಕಣಗಳ ಕಡತಗಳು, ಅನ್ಯಕ್ರಾಂತ ಅಭಿಪ್ರಾಯ ನೀಡುವ ಕಡತಗಳ ವಿಲೇವಾರಿ, ನ್ಯಾಯಾಲಯದಲ್ಲಿನ ಪ್ರಕರಣಗಳು, ಲೋಕ್‌ ಅದಾಲತ್ ಪ್ರಕರಣಗಳು ಸೇರಿದಂತೆ ಅಗತ್ಯ ಕೆಲಸಗಳು ಮುಂದುವರಿಯಲಿವೆ. ಆದರೆ, ನಿವೇಶನಗಳ ನೋಂದಣಿ, ಬದಲಿ ನಿವೇಶನ, ಶೇ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಸೇರಿದಂತೆ ಕೆಲವೊಂದು ಕಾರ್ಯಗಳು ನಡೆಯುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಡಾ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರವು ತನಿಖಾ ಆಯೋಗವನ್ನು ನೇಮಿಸಿ ಜುಲೈ 1ರಂದು ಆದೇಶಿಸಿತ್ತು. ಮುಂದಿನ ಆದೇಶದವರೆಗೆ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದಂತೆ ಸೂಚಿಸಿತ್ತು. ಅಂದಿನಿಂದ ಮುಡಾದಲ್ಲಿ ಪ್ರಮುಖ ಸೇವೆಯಲ್ಲಿ ವ್ಯತ್ಯಯ ಆಗಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಿದ್ದು, ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡುವಂತೆ ಕೋರಿ ಮುಡಾ ಆಯುಕ್ತ ರಘುನಂದನ್‌ ಜುಲೈ 31ರಂದು ನಗರಾಭಿವೃದ್ಧಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT