ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದಲ್ಲಿ ವಿಶ್ವ ಜಿರಾಫೆ ದಿನಾಚರಣೆ

Last Updated 24 ಜೂನ್ 2018, 16:03 IST
ಅಕ್ಷರ ಗಾತ್ರ

ಮೈಸೂರು: ಅತಿ ಎತ್ತರದ ಹಾಗೂ ನೀಳ ಕುತ್ತಿಗೆಯ ಪ್ರಾಣಿ ಜಿರಾಫೆ ದಿನಾಚರಣೆಯನ್ನು ಚಾಮರಾಜೇಂದ್ರ ಮೃಗಾಲಯದಲ್ಲಿ ಇದೇ ಮೊದಲ ಬಾರಿಗೆ ಆಚರಿಸಲಾಯಿತು.

ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿರಾಫೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಪೋಸ್ಟರ್‌ಗಳ ಮೂಲಕ ಅರಿವು ಮೂಡಿಸಲಾಯಿತು.

‘ದೇಶದ ವಿವಿಧ ಮೃಗಾಲಯಗಳಲ್ಲಿ ಸುಮಾರು 30 ಜಿರಾಫೆಗಳು ಇವೆ. ಈ ಪ‍್ರಾಣಿಗಳು ದೇಶದಲ್ಲಿ ಅವನತಿ ಅಂಚಿನಲ್ಲಿವೆ. ವಿಶ್ವದಲ್ಲಿ ಕಳೆದ 30 ವರ್ಷಗಳಲ್ಲಿ ಶೇ 40ರಷ್ಟು ಕಡಿಮೆ ಆಗಿವೆ. ಹೀಗಾಗಿ, ಈ ಪ್ರಾಣಿ ಸಂತತಿಯನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದರಾಮಪ್ಪ ತಿಳಿಸಿದರು.

‘ಜೂನ್‌ 21 ಸುದೀರ್ಘ ದಿನ. ಜಿರಾಫೆ ಅತಿ ಎತ್ತರದ ಪ್ರಾಣಿ. ಹೀಗಾಗಿ, ಈ ದಿನವನ್ನು ಜಿರಾಫೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಮೃಗಾಲಯದಲ್ಲಿ ಏಳು ಜಿರಾಫೆಗಳು ಇರುವುದು ವಿಶೇಷ. ಜೊತೆಗೆ ಸಂತಾನೋತ್ಪತ್ತಿ ಕೇಂದ್ರವೂ ಇಲ್ಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT