ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಯ ಕನಸಿನಲ್ಲಿ ಯೋಗಾಭ್ಯಾಸಕ್ಕೆ ಮುನ್ನುಡಿ

ಅಚ್ಚುಕಟ್ಟಾಗಿ ನಡೆದ ಮೊದಲ ತಾಲೀಮು
Last Updated 2 ಜೂನ್ 2019, 20:02 IST
ಅಕ್ಷರ ಗಾತ್ರ

ಮೈಸೂರು: ಬೆಳಿಗ್ಗೆಯ ಚುಮುಚುಮು ವಾತಾವರಣದಲ್ಲಿ ನೂರಾರು ಮಂದಿ ಯೋಗಪಟುಗಳು ಭಾನುವಾರ ವಿಶ್ವ ಯೋಗ ದಿನಾಚರಣೆಯ ತಾಲೀಮು ನಡೆಸಿದರು.

ಮೋಡಮುಸುಕಿದ ವಾತಾವರಣ ಇದ್ದುದು ಯೋಗಾಭ್ಯಾಸಕ್ಕೆ ಪೂರಕವಾಗಿತ್ತು. ಯೋಗ ಫೆಡರೇಷನ್ ಆಫ್ ಟ್ರಸ್ಟ್‌ ಆಯೋಜಿಸಿದ್ದ ಈ ಪೂರ್ವಭಾವಿ ಪ್ರದರ್ಶನದಲ್ಲಿ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂದಿನ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಜಯಚಾಮರಾಜ ಒಡೆಯರ್ ವೃತ್ತ (ಹಾರ್ಡಿಂಜ್ ವೃತ್ತ)ದವರೆಗೂ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಆದರೆ, ಅಲ್ಲಿಯವರೆಗೂ ಕೂರುವಷ್ಟು ಸಂಖ್ಯೆಯಲ್ಲಿ ಯೋಗಪಟುಗಳು ಬಂದಿರಲಿಲ್ಲ.

ಈ ವರ್ಷದ ಅತಿ ದೊಡ್ಡ, ಮೊದಲ ಪ್ರಯತ್ನ ಇದಾಗಿತ್ತು. ಎಲ್ಲೂ ಗೊಂದಲ ಸೃಷ್ಟಿಯಾಗಲಿಲ್ಲ. ನಿರ್ವಾಹಕರು ಸೂಚಿಸಿದ ಆಸನಗಳನ್ನು ಯೋಗಪಟುಗಳು ಪ್ರದರ್ಶಿಸಿದರು.

ಹಳದಿ ಬಣ್ಣದ ಸಮವಸ್ತ್ರ ತೊಟ್ಟವರೇ ಹೆಚ್ಚಿನ ಮಂದಿ ಇದ್ದರು. ಯೋಗಮ್ಯಾಟ್ ಹಾಸಿಕೊಂಡು ಯೋಗಾಭ್ಯಾಸಕ್ಕೆ ಯೋಗಪಟುಗಳು ಅಣಿಯಾದರು. ಇವರಲ್ಲಿ ಮಕ್ಕಳು, ಹಿರಿಯ ನಾಗರಿಕರು, ಯುವಕರು, ಯುವತಿಯರು, ಮಧ್ಯ ವಯಸ್ಕರೂ ಇದ್ದರು.

ಜಿಲ್ಲಾಡಳಿತ, ಯೋಗ ಸ್ಪೋರ್ಟ್ ಫೌಂಡೇಷನ್ (ವೈಎಸ್‌ಎಫ್), ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ಎಸ್‌ಪಿವೈಎಸ್‌ಎಸ್‌), ಮೈಸೂರು ಯೋಗ ಒಕ್ಕೂಟ, ಬಾಬಾ ರಾಮದೇವ್ ಭಾರತ್ ಸ್ವಾಭಿಮಾನಿ ಟ್ರಸ್ಟ್‌ ಸೇರಿದಂತೆ ವಿವಿಧ ಸಂಘಟನೆಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದವು.

‘ಸಂಗಚಧ್ವಂ, ಸಂವದಧ್ವಂ ಸಂವೋ ಮನಾಂಸಿ ಜಾನತಾಮ್...’ ಎಂಬ ಪ್ರಾರ್ಥನೆಯೊಂದಿಗೆ ಆರಂಭವಾದ ಯೋಗಾಭ್ಯಾಸ 45 ನಿಮಿಷ ನಡೆಯಿತು.

19 ಬಗೆಯ ಆಸನಗಳನ್ನು ಪ್ರದರ್ಶಿಸಲಾಯಿತು. ಕೊನೆಯ 14 ನಿಮಿಷ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪಗಳನ್ನು ಮಾಡಲಾಯಿತು.

ಅಂತರರಾಷ್ಟ್ರೀಯ ಯೋಗಪಟು ಖುಷಿ ತಾಲೀಮಿನಲ್ಲಿ ಪಾಲ್ಗೊಂಡಿದ್ದು ಪ್ರಧಾನ ಆಕರ್ಷಣೆ ಎನಿಸಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT