ಮೈಸೂರು: ಇಲ್ಲಿನ ಅರಮನೆಯ ಆನೆಯೊಂದರ ಮಾವುತ ಕಾಳಪ್ಪ (38) ಅವರು, ಆನೆಯ ಮೇಲಿಂದ ಬಿದ್ದು ಸೋಮವಾರ ಸಂಜೆ ಮೃತಪಟ್ಟಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವ ರಾದ ಇವರು ಅರಮನೆಯಲ್ಲಿ ಸಾಕಾನೆ ‘ರೂಬಿ’ಯ ಮಾವುತರಾಗಿದ್ದರು. ಆನೆಯನ್ನು ವಾಯುವಿಹಾರಕ್ಕೆ ಕರೆದುಕೊಂಡು ಹೋಗುವಾಗ, ತಲೆಸುತ್ತು ಬಂದು ಆನೆ ಮೇಲಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣ ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಈ ಕುರಿತು ಅರಮನೆ ಜಾಮದಾರ್ ನಂಜುಂಡ ಎಂಬುವವರು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಮನೆಯಲ್ಲಿ 6 ಆನೆಗಳಿವೆ. ಇವುಗಳನ್ನು ನೋಡಿಕೊಳ್ಳಲು 10 ಮಂದಿ ಕೆಲಸಗಾರರು ಇದ್ದಾರೆ. ಕಾಳಪ್ಪ 20 ವರ್ಷಗಳಿಂದ ‘ರೂಬಿ’ ಯನ್ನು ನೋಡಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.