ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಪರಿಸರಸ್ನೇಹಿ ಮನೆ ನಿರ್ಮಿಸಿ'

Last Updated 7 ಡಿಸೆಂಬರ್ 2012, 7:04 IST
ಅಕ್ಷರ ಗಾತ್ರ

ಮೈಸೂರು: `ಪರಿಸರ ಸ್ನೇಹಿ ಹಾಗೂ ಕಳ್ಳತನಕ್ಕೆ ಆಸ್ಪದ ನೀಡದಂತಹ ಮನೆಗಳನ್ನು ನಿರ್ಮಾಣ ಮಾಡಬೇಕು' ಎಂದು ನಗರ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್ ಕರೆ ನೀಡಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಮೈ-  ಬಿಲ್ಡ್-12 ಐದು ದಿನಗಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

`ರಾಜಧಾನಿ ಬೆಂಗಳೂರಿನಲ್ಲಿ ಕಿಷ್ಕಿಂಧೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಉಸಿರುಗಟ್ಟಿಸುವ ವಾತಾವರಣ ಇದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ದೊಡ್ಡದಾದ ರಸ್ತೆಗಳನ್ನು ಬಿಟ್ಟು ಮುಂದಾಲೋಚನೆ ಇಟ್ಟುಕೊಂಡು ಮನೆಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ಭವಿಷ್ಯದಲ್ಲಿ ತೊಂದರೆ ಅನುಭವಿಸುವುದನ್ನು ತಪ್ಪಿಸಬಹುದು. ಮೈಸೂರು ನಗರ ಸುಂದರ ವಾಗಿರುವಂತೆ ನೋಡಿಕೊಳ್ಳಬೇಕು' ಎಂದು ಹೇಳಿದರು.

`ಗುಂಪು ಮನೆಗಳನ್ನು ನಿರ್ಮಾಣ ಮಾಡುವಾಗ ಕಿಟಕಿ-ಬಾಗಿಲುಗಳ ಬಗ್ಗೆ ಎಚ್ಚರ ವಹಿಸಬೇಕು. ಕಳ್ಳತನಕ್ಕೆ ಆಸ್ಪದ ನೀಡುವಂತೆ ಇರಬಾರದು. ಕಡಿಮೆ ಅವಧಿಯಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಸಮಯ ಮತ್ತು ವೆಚ್ಚವನ್ನು ಉಳಿತಾಯ ಮಾಡ ಬಹುದು.

ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಸಂಘ 20 ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಮನೆ ಕಟ್ಟಿಕೊಟ್ಟಿದೆ. ಸುರಕ್ಷಿತ ಮನೆಗಳನ್ನು ನಿರ್ಮಾಣ ಮಾಡುವ ಕುರಿತು ಕಟ್ಟಡ ನಿರ್ಮಾಣಕಾರರ ಸಭೆಯನ್ನು ಶೀಘ್ರವೇ ಕರೆದು ಚರ್ಚಿಸಲಾಗುವುದು' ಎಂದು ತಿಳಿಸಿದರು.

ಮೈ-ಬಿಲ್ಡ್ ಅಧ್ಯಕ್ಷ ವಿ.ಆರ್.ನಯದ್ರುವ ಮಾತನಾಡಿ, `ಮೈ-ಬಿಲ್ಡ್ ವಸ್ತುಪ್ರದರ್ಶನ ಡಿ.10 ರವರೆಗೆ ನಡೆಯಲಿದೆ. ಒಂದು ಮನೆ ಕಟ್ಟಲು ಏನೇನು ಬೇಕು ಎಲ್ಲ ವಸ್ತುಗಳು ಪ್ರದರ್ಶನದಲ್ಲಿ ಇವೆ. ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಮಳಿಗೆಗಳನ್ನು ಹಾಕಲು ಅವಕಾಶ ನೀಡಿವೆ. ಈ ಬಾರಿ ಒಟ್ಟು 170 ಮಳಿಗೆಗಳು ಇವೆ. ಸಾರ್ವಜನಿಕರು ವಸ್ತುಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.

ಬಿಲ್ಡರ್ಸ್‌ ಅಸೋಸಿಯೇಷನ್ ಆಫ್ ಇಂಡಿಯ ಮೈಸೂರು ಘಟಕ ಅಧ್ಯಕ್ಷ ಎ.ವಿ.ಶ್ರೀಧರ್, ಘಟಕದ ಮಾಜಿ ಅಧ್ಯಕ್ಷರಾದ ಎನ್.ಎಸ್. ನಂದಕುಮಾರ್, ಶ್ರೀರಾಮ್, ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಕ್ರೆಡಯ್ ಸಂಸ್ಥೆ ಮೈಸೂರು ಘಟಕ ಅಧ್ಯಕ್ಷ ಎಂ.ಬಿ.ನಾಗಕುಮಾರ್ ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT