ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಸುತ್ತಿನ ಸಂಘರ್ಷಕ್ಕೆ ವೇದಿಕೆ ಸಜ್ಜು

ನಾಳೆಯಿಂದ ಬಿಜೆಪಿ ಕಾರ್ಯಕಾರಿಣಿ; ಸಿದ್ಧತೆ ಪರಿಶೀಲಿಸಿದ ಲಿಂಬಾವಳಿ, ಅರುಣಕುಮಾರ್‌
Last Updated 5 ಮೇ 2017, 7:48 IST
ಅಕ್ಷರ ಗಾತ್ರ

ಮೈಸೂರು: ಕೆ.ಎಸ್‌.ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್‌ ವಿವಾದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಜೊತೆಗಿನ ಬಿಕ್ಕಟ್ಟು, ಪಕ್ಷದೊಳಗೆ ಆಂತರಿಕ ಸಂಘರ್ಷ ಶನಿ ವಾರ ಇಲ್ಲಿ ಆರಂಭವಾಗಲಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿಯ ಪ್ರಮುಖ ಅಂಶವಾಗುವುದು ನಿಚ್ಚಳವಾಗಿದೆ.
ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌ ಅವರ ಬಳಿ ಯಡಿಯೂರಪ್ಪ ಬಣ ಹಾಗೂ ಈಶ್ವರಪ್ಪ ಬಣ ಮತ್ತೊಮ್ಮೆ ತಮ್ಮ ಅಸಮಾಧಾನ ಹೊರಹಾಕಲು ಸಿದ್ಧತೆ ನಡೆಸಿವೆ.

‘ರಾಯಣ್ಣ ಬ್ರಿಗೇಡ್‌ ಸಮಾವೇಶ ವನ್ನು ಮುಂದುವರಿಸುವುದಾಗಿ ಈಶ್ವರಪ್ಪ ಪದೇಪದೇ ಹೇಳುತ್ತಿ ರುವ ವಿಚಾರ ಸಭೆಯಲ್ಲಿ ಪ್ರತಿಧ್ವನಿಸು ವುದು ಖಚಿತ. ಈ ಸಂಬಂಧ ಉಭಯ ಬಣಗಳ ತಮ್ಮ ವಾದ ಮುಂದಿಡಲು ಕಾರ್ಯ ಸೂಚಿ ಸಿದ್ಧಪಡಿಸುತ್ತಿವೆ’ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರಮುಖ ವಾಗಿ ಬರಗಾಲ ನಿರ್ವಹಣೆ ಹಾಗೂ ಸಾಲಮನ್ನಾ ವಿಚಾರ ಕೈಗೆತ್ತಿಕೊಳ್ಳಲಾ ಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಈ ವಿಷಯಗಳ ಜೊತೆಗೆ 2018ರ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯ ರಾಜಕೀಯ ಪರಿಸ್ಥಿತಿ ಹಾಗೂ ರಾಷ್ಟ್ರೀಯ ರಾಜಕಾರಣದಲ್ಲಿ ಬಿಜೆಪಿಗೆ ಸಿಗುತ್ತಿರುವ ಗೆಲುವಿನ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವ ನಿರೀಕ್ಷೆ ಇದೆ.

ಶನಿವಾರ ಹಾಗೂ ಭಾನುವಾರ ನಡೆ ಯಲಿರುವ ಕಾರ್ಯಕಾರಿಣಿಗೆ ರಾಜೇಂದ್ರ ಕಲಾಮಂದಿರದಲ್ಲಿ ವೇದಿಕೆ ಸಜ್ಜು ಗೊಂಡಿದ್ದು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ್‌ ಶುಕ್ರವಾರ ಭೇಟಿ ನೀಡಿ ಸಭೆ ನಡೆಸಿದರು. ಅಲ್ಲದೆ, ಪಕ್ಷದ ಸ್ಥಳೀಯ ಮುಖಂಡರು ಜೊತೆ ಚರ್ಚಿಸಿದರು. ಸಭೆಯಲ್ಲಿ ಸಂಸದ ಪ್ರತಾಪಸಿಂಹ, ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ, ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಇದ್ದರು.

ಕಾರ್ಯಕಾರಿಣಿಗೆ ಉತ್ತರ ಕರ್ನಾಟಕ ಹಾಗೂ ದೂರದ ಜಿಲ್ಲೆಗಳ ಮುಖಂಡರು ಶುಕ್ರವಾರ ಸಂಜೆ ವೇಳೆಗೆ ನಗರಕ್ಕೆ ಧಾವಿ ಸಲಿದ್ದಾರೆ. ಇನ್ನುಳಿದವರು ಶನಿವಾರ ಬೆಳಿಗ್ಗೆ ಬರಲಿದ್ದಾರೆ.

ಮುರಳೀಧರ ರಾವ್‌, ಯಡಿ ಯೂರಪ್ಪ ಅವರಲ್ಲದೆ, ಉಪ ಪ್ರಭಾರಿ ಡಿ.ಪುರಂದರೇಶ್ವರಿ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ.ಸದಾನಂದ ಗೌಡ, ರಮೇಶ್‌ ಜಿಗಜಿಣಗಿ, ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತರಾಮನ್‌ ಸಭೆ ಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖರು. 

ತಮಗೆ ಕಾರ್ಯಕಾರಿಣಿಗೆ ಆಹ್ವಾನ ಸಿಕ್ಕಿಲ್ಲ ಎಂದು ಹೇಳುತ್ತಿರುವ ಈಶ್ವರಪ್ಪ ಅವರು ಸಭೆಯಲ್ಲಿ ಪಾಲ್ಗೊಳ್ಳುವ ವಿಚಾರ ಖಚಿತವಾಗಿಲ್ಲ. ಆದರೆ, ಆಹ್ವಾನ ನೀಡಲಾಗಿದೆ ಎಂಬುದನ್ನು ಪ್ರಧಾನ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ.

‘ಕಾರ್ಯಕಾರಿಣಿಗೆ ಸಿದ್ಧತೆ ಪೂರ್ಣಗೊಂಡಿದೆ. ಸದಸ್ಯರನ್ನು ಸ್ವಾಗತಿಸಲು ತಯಾರಿ ನಡೆಸಿದ್ದೇವೆ. ಅಲ್ಲದೆ, ರೈಲಿನಲ್ಲಿ ಬರುವ ಸದಸ್ಯರಿಗೆ ಮಾಹಿತಿ ನೀಡಲು ಕೌಂಟರ್‌ ತೆರೆದಿದ್ದೇವೆ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌. ಮಂಜುನಾಥ್‌ ತಿಳಿಸಿದರು.

*
ಯಡಿಯೂರಪ್ಪ ಅವರು ಶುಕ್ರ ವಾರ ಸಂಜೆ ನಗರಕ್ಕೆ ಬರಲಿ ದ್ದಾರೆ. ಈಶ್ವರಪ್ಪ ಅವರಿಗೆ ಮುಖ್ಯ ಕಚೇರಿಯಿಂದಲೇ ಅಧಿಕೃತ ಆಹ್ವಾನ ಹೋಗಿದೆ. ಅವರು ಬರುವ ವಿಶ್ವಾಸ ಇದೆ.
–ಡಾ.ಬಿ.ಎಚ್‌.ಮಂಜುನಾಥ್‌,
ನಗರ ಘಟಕದ ಅಧ್ಯಕ್ಷ, ಬಿಜೆಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT