ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ, ಮಕ್ಕಳ ದಸರಾ; ಯುವ ಸಂಭ್ರಮ

Last Updated 11 ಅಕ್ಟೋಬರ್ 2012, 10:40 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಆರಂಭಕ್ಕೆ ಐದು ದಿನ ಮಾತ್ರ ಬಾಕಿ ಉಳಿದಿದ್ದು, ದಸರಾ ಉಪ ಸಮಿತಿಗಳು ಭರದ ಸಿದ್ಧತೆ ಆರಂಭಿಸಿವೆ. ಆದಾಗ್ಯೂ, ಉಪ ಸಮಿತಿಗಳಿಗೆ ಅನುದಾನ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
17 ರಿಂದ `ಯುವಸಂಭ್ರಮ~

ಈ ಬಾರಿಯ ಯುವಸಂಭ್ರಮ ಅ. 17 ರಿಂದ 22ರ ವರೆಗೆ ಆರು ದಿನಗಳ ಕಾಲ `ಮಾನಸ ಗಂಗೋತ್ರಿಯ ಬಯಲು ರಂಗಮಂದಿರ~ದಲ್ಲಿ ಜರುಗಲಿದೆ. ಅ. 22 ರಂದು 40 ದೇಶಗಳ ವಿದ್ಯಾರ್ಥಿಗಳು ತಮ್ಮ ದೇಶದ ಉಡುಗೆ ತೊಡುಗೆಯಲ್ಲಿ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿರುವುದು ವಿಶೇಷ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಯುವಸಂಭ್ರಮ ಉಪ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, `ಯುವಸಂಭ್ರಮ ಕಾರ್ಯಕ್ರಮವು ಪ್ರತಿ ನಿತ್ಯ ಸಂಜೆ 6 ರಿಂದ ರಾತ್ರಿ 11 ಗಂಟೆ ವರೆಗೆ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಪ್ರತಿ ದಿನ 18-22 ಕಾಲೇಜು ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡಲಿದ್ದು, ರಾಜ್ಯದಾದ್ಯಂತ ಒಟ್ಟು 117 ತಂಡಗಳು ಭಾಗವಹಿಸುತ್ತಿವೆ~ ಎಂದರು.

`ಪರಿಸರ ಸಂರಕ್ಷಣೆ, ಜೀವನದಿ, ಬರಮುಕ್ತಿ ಗಾಗಿ ಪ್ರಾರ್ಥನೆ, ರೇಟ್ರೋ ಟು ಮೆಟ್ರೋ, ರಾಷ್ಟ್ರೀಯ ಭಾವೈಕ್ಯತೆ, ಮಾನವ ಜೀವನ ಅವತಾರ, ಸ್ವತಂತ್ರ್ಯ ಹೋರಾಟಗಾರರ ವಸ್ತ್ರ ವಿನ್ಯಾಸ ಪ್ರದರ್ಶನ, ದಶಾವತಾರ, ಕೃಷ್ಣನ ಲೀಲೆ, ಹೊಯ್ಸಳ ವೈಭವ, ಗಣೇಶನ ಅವತಾರ ಸೇರಿದಂತೆ ವಿವಿಧ ಪರಿಕಲ್ಪನೆಗಳಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ವಿದೇಶಿ ವಿದ್ಯಾರ್ಥಿಗಳ 10 ತಂಡಗಳು ಆಯಾ ದೇಶದ ಸಂಸ್ಕೃತಿಯನ್ನು ಬಿಂಬಿಸಲಿವೆ. ನಗರದ ವಿವಿಧೆಡೆ ಎಲ್‌ಸಿಡಿ ಪ್ರೊಜೆಕ್ಟರ್ ಮೂಲಕ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊ ಡಲಾಗುತ್ತಿದೆ~ ಎಂದು ತಿಳಿಸಿದರು.

ಉಪವಿಶೇಷಾಧಿಕಾರಿ ಬಿ.ರಾಮು, ಕಾರ್ಯಾ ಧ್ಯಕ್ಷ ಎಂ.ಎನ್.ನಟರಾಜ್, ಉಪಾ ಧ್ಯಕ್ಷರಾದ ಕೆ.ಆರ್.ಚಿದಂಬರ, ಎಂ.ವರುಣಾ ಮಂಜುನಾಥ್, ಗೀತಾಶ್ರೀ ಕೆ.ಎಸ್.ರಾವ್, ಎಂ.ಎಸ್.ಮನೋನ್ಮಣಿ, ಎಂ.ನೇತ್ರಾವತಿ ಇದ್ದರು.
ಮಹಿಳಾ ದಸರಾ; ಅತ್ತೆ ಸೊಸೆ ಅಡುಗೆಈ ಬಾರಿಯ ಮಹಿಳಾ ದಸರಾದಲ್ಲಿ ಅತ್ತೆ ಸೊಸೆಯರು `ಒಲೆ ರಹಿತ ಅಡುಗೆ~ ತಯಾರು ಮಾಡುವ ಮೂಲಕ ಗಮನ ಸೆಳೆಯಲಿದ್ದಾರೆ.

ಕಲಾಮಂದಿರ ಆವರಣ ಹಾಗೂ ಅರಮನೆ ಮುಂಭಾಗದಲ್ಲಿ ಅ. 18 ರಿಂದ 21ರ ವರೆಗೆ ನಾಲ್ಕು ದಿನಗಳ ಕಾಲ ಮಹಿಳಾ ದಸರಾ ಅಂಗ ವಾಗಿ ವಸ್ತು ಪ್ರದರ್ಶನ ಮತ್ತು ಮಾರಾಟ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ಮಹಿಳಾ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್, `ಅ. 18 ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದ ಆವರಣದಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ.
 
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಮೇಳಕ್ಕೆ ಚಾಲನೆ ನೀಡುವರು. 19 ರಂದು ಮಧ್ಯಾಹ್ನ 12 ಗಂಟೆಗೆ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಸಚಿವ ಕಳಕಪ್ಪ ಬಂಡಿ ಮಹಿಳಾ ದಸರಾ ಉದ್ಘಾಟಿಸಲಿದ್ದಾರೆ~ ಎಂದರು.

`ಅ. 19ರಂದು ಬೆಳಿಗ್ಗೆ 7 ರಿಂದ 8.30ರ ವರೆಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ರಂಗೋಲಿ ಸ್ಪರ್ಧೆ ನಡೆಯಲಿದೆ~ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ್, ಜಿಲ್ಲಾ ಕಾರ್ಯಕ್ರಮಾಧಿಕಾರಿ ಜಿ.ಸಿ.ಚಂದ್ರಪ್ಪ, ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ. ಬಸವರಾಜು, ಮಂಗಳಾ ಸೋಮಶೇಖರ್ ಇದ್ದರು.

ಇನ್ನುಳಿದ ಕಾರ್ಯಕ್ರಮ
ಅ. 19 ರಂದು ಮಧ್ಯಾಹ್ನ 3 ಗಂಟೆಗೆ ಅತ್ತೆ ಸೊಸೆಯರಿಂದ ಒಲೆರಹಿತ ಅಡುಗೆ ತಯಾರಿ, 4 ಗಂಟೆಗೆ ಜಾನಪದ, ಸೋಬಾನೆ, ಭಾವಗೀತೆ ಗಾಯನ ಕಾರ್ಯಕ್ರಮ, ಅ. 20 ರಂದು ಬೆಳಿಗ್ಗೆ 11 ಗಂಟೆಗೆ ಕಣ್ಣು ಕಟ್ಟಿಕೊಂಡು ಮಡಕೆ ಒಡೆಯುವ ಸ್ಪರ್ಧೆ, 12 ಗಂಟೆಗೆ ಸಂಗೀತ ಕುರ್ಚಿ, 2 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, 3 ಗಂಟೆಗೆ ಆಶುಭಾಷಣ ಸ್ಪರ್ಧೆ, 4 ಗಂಟೆಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿವೆ.

ಅ. 21ರಂದು ಬೆಳಿಗ್ಗೆ 11 ಗಂಟೆಗೆ ಕುಂಟೆ ಬಿಲ್ಲೆ, 12 ಗಂಟೆಗೆ ಬಕೆಟ್ ಒಳಗೆ ಚೆಂಡೆಸೆತ, 2 ಗಂಟೆಗೆ ಸಾಂಪ್ರದಾಯಿಕ ಉಡುಗೆ-ತೊಡುಗೆ ಸ್ಪರ್ಧೆ, 3 ಗಂಟೆಗೆ ಮಹಿಳಾ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಲಿಂಗ ತಾರತಮ್ಯ ನಿವಾರಣೆಯಲ್ಲಿ ಮಹಿಳೆ/ಪುರುಷರ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ಹಾಗೂ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ.

ಮಕ್ಕಳ ದಸರಾ; ನಾನಾ ಸ್ಪರ್ಧೆ
ನಗರದ ಜಗನ್ಮೋಹನ ಅರಮನೆ ಸಭಾಂಗ ಣದಲ್ಲಿ ಅ. 17ರಿಂದ 19ರ ವರೆಗೆ ಮೂರು ದಿನಗಳ ಕಾಲ `ಮಕ್ಕಳಾ ದಸರಾ~ ನಡೆಯ ಲಿದ್ದು, ವಿವಿಧ ಬಗೆಯ ಸ್ಪರ್ಧೆ ಆಯೋಜಿಸ ಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಕ್ಕಳಾ ದಸರಾ ಉಪ ಸಮಿತಿ ಅಧ್ಯಕ್ಷೆ ವಿದ್ಯಾ ಅರಸ್, `ಜಿಲ್ಲೆಯ ಎಲ್ಲ ತಾಲ್ಲೂಕುಗಳ 1 ರಿಂದ 10ನೇ ತರಗತಿ ಮಕ್ಕಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 750ಕ್ಕೂ ಹೆಚ್ಚು ಅಂಗವಿಕಲ ಮಕ್ಕಳು ಹಾಗೂ ಅವರ ಪೋಷಕರೂ ಭಾಗವಹಿಸುವರು. ವೇಷ ಭೂಷಣ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಜನಪದ  ನೃತ್ಯ, ಯೋಗ ಪ್ರದರ್ಶನ ಮತ್ತು ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ~ ಎಂದರು.

`ಅ. 23 ರಂದು ಸಂಜೆ 4 ಗಂಟೆಗೆ ಕುಪ್ಪಣ್ಣ ಉದ್ಯಾನದಲ್ಲಿ ಅಂಗವಿಕಲ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಾಗವ ಹಿಸುವ ಎಲ್ಲ ಮಕ್ಕಳಿಗೂ ಬಾಲಭವನ, ಅರಮನೆ, ಮೃಗಾಲಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ವಿಜ್ಞಾನ ಉಪಕರಣಗಳು, ಕಲಿಕಾ ಉಪಕರಣಗಳ ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದು ತಿಳಿಸಿದರು.

ಕಲಾಮೇಳ; ಕಲಾಕೃತಿಗಳ ಮಾರಾಟ

`ದಸರಾ ಉತ್ಸವ ಪ್ರಯುಕ್ತ ಅ. 20 ರಿಂದ 22ರ ವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಅಕಾಡೆಮಿಯಲ್ಲಿ (ಕಾವಾ) ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆ ವರೆಗೆ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸ ಲಾಗಿದೆ~ ಎಂದು ಕಲಾಮೇಳ ಉಪ ಸಮಿತಿ ಅಧ್ಯಕ್ಷೆ ಕಮಲಮ್ಮ ಹೇಳಿದರು.
`25 ರಿಂದ 27ರ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳ ಕಲಾ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಕಲಾಕೃತಿ, ಚಿತ್ರಕಲೆ, ಗ್ರಾಫಿಕ್ಸ್, ಅನ್ಯಯಕಲೆ ಹಾಗೂ ಛಾಯಾಚಿತ್ರ ಕಲೆಗಳನ್ನು ಅ. 17 ರೊಳಗೆ ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳಿಗೆ ಪ್ರಥಮ ರೂ. 5 ಸಾವಿರ, ದ್ವಿತೀಯ ರೂ. 3 ಸಾವಿರ ಹಾಗೂ ತೃತೀಯ ರೂ. 2 ಸಾವಿರ ಬಹುಮಾನ ಹಾಗೂ 5 ಜನರಿಗೆ ತಲಾ ಒಂದು ಸಾವಿರದಂತೆ ಸಮಾಧಾನ ಕರ ಬಹುಮಾನ ನೀಡಲಾಗುವುದು~ ಎಂದರು.

`ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಗೂ ಸ್ಪರ್ಧೆ ಆಯೋಜಿಸಲಾಗಿದೆ. ಚಿತ್ರಕಲೆ, ಶಿಲ್ಪ ಕಲೆ, ಗ್ರಾಫಿಕ್ಸ್, ಅನ್ವಯಿಕ ಕಲೆ ಹಾಗೂ ಛಾಯಾಚಿತ್ರ ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲಿ ರೂ. 5 ಸಾವಿರದಂತೆ ಮೂವರಿಗೆ ಬಹುಮಾನ ನೀಡಲಾಗುವುದು. ಅ. 21ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕಾವಾ ಆವರಣದಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತ ವಿದ್ಯಾರ್ಥಿ ಗಳಿಗೆ ತಲಾ ಒಂದು ಸಾವಿರದಂತೆ ಐವರು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗು ವುದು~ ಎಂದರು.

ಕಾವಾ ಡೀನ್ ವಿ.ಎ.ದೇಶಪಾಂಡೆ, ಕಲಾ ಮೇಳ ದಸರಾ ಉಪ ಸಮಿತಿ ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ನಾಗರಾಜ್, ಪದ್ಮನಾಭರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT