‘ಸಮುದಾಯ ಭವನಕ್ಕೆ ₹1 ಕೋಟಿ’

ಮಂಗಳವಾರ, ಜೂಲೈ 23, 2019
25 °C

‘ಸಮುದಾಯ ಭವನಕ್ಕೆ ₹1 ಕೋಟಿ’

Published:
Updated:
Prajavani

ವಿಜಯಪುರ: ತಿಕೋಟಾ ತಾಲ್ಲೂಕಿನ ತೊರವಿ ತಾಂಡಾ ನಂ.3 (ಕೆಸರಾಳ)ರಲ್ಲಿ ಕಾಳಿಕಾದೇವಿ ಜಾತ್ರಾ ಮಹೋತ್ಸವವು ಧನಸಿಂಗ್ ಮಹಾರಾಜರ ನೇತೃತ್ವದಲ್ಲಿ ಈಚೆಗೆ ವಿಜೃಂಭಣೆಯಿಂದ ಜರುಗಿತು.

ಗೃಹ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ತೊರವಿಯ ಲಕ್ಷ್ಮೀ ನರಸಿಂಹ ದೇವಸ್ಥಾನ ಹಾಗೂ ಲಕ್ಕಮ್ಮದೇವಿ ದೇವಸ್ಥಾನ ಮತ್ತು ಕಾಳಿಕಾದೇವಿ ದೇವಸ್ಥಾನಗಳು ವಿಶ್ವಪ್ರಸಿದ್ಧಿ ಪಡೆದಿವೆ. ದೇವಸ್ಥಾನ ಬೃಹತ್ ಪ್ರಮಾಣದಲ್ಲಿ ಬೆಳೆಯಲು ಧನಸಿಂಗ್ ಮಹಾರಾಜರ ಪರಿಶ್ರಮ ಬಹಳಷ್ಟಿದೆ’ ಎಂದರು.

‘ದೇವಸ್ಥಾನಕ್ಕೆ ಕೆಬಿಜೆಎನ್‍ಎಲ್ ಯೋಜನೆಯಡಿ ₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಒದಗಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಜಾತ್ರೆಯಲ್ಲಿ ಸಮುದಾಯ ಭವನವನ್ನು ಉದ್ಘಾಟಿಸುತ್ತೇನೆ’ ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಸಂಸದೀಯ ಕಾರ್ಯದರ್ಶಿ, ಶಾಸಕ ದೇವಾನಂದ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98 ಅಂಕ ಪಡೆದಿರುವ ತೊರವಿ ತಾಂಡಾ ನಂ.1ರ ನಯನಾ ರಾಠೋಡ ಅವರನ್ನು ಸನ್ಮಾನಿಸಲಾಯಿತು.

ಗೋವಾ ಶಾಸಕ ಮಾಂಜ್ರೇಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ಮಲ್ಲಿಕಾರ್ಜುನ ನಾಯಕ, ಬಿಎಲ್‌ಡಿಇ ಸಂಸ್ಥೆಯ ಮಾಜಿ ನಿರ್ದೇಶಕ ಸುರೇಶಗೌಡ ಕೆ.ಪಾಟೀಲ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಮಹಾದೇವ ರಾಠೋಡ, ಬಂಜಾರ ಕ್ರಾಂತಿದಳದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಚವ್ಹಾಣ, ತೊರವಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶಗೌಡ ಕೆ.ಬಿರಾದಾರ, ಅನಿತಾ ರಾಠೋಡ ಇದ್ದರು.

ದೇವರಾಜ ರಾಠೋಡ ಸ್ವಾಗತಿಸಿದರು. ಸುರೇಶ ಬಿಜಾಪುರ ನಿರೂಪಿಸಿ, ಚಂದು ಜಾಧವ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !