ಭಾನುವಾರ, ಆಗಸ್ಟ್ 25, 2019
27 °C

‘ನೆಮ್ಮದಿಗಾಗಿ ಪ್ರವಚನ ಆಲಿಸಿ’

Published:
Updated:
Prajavani

ವಿಜಯಪುರ: ‘ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು’ ಎಂದು ಸುರಪುರ ಯಕ್ತಾಪುರ ಹಿರೇಮಠದ ಗಜದಂಡಯ್ಯ ಸ್ವಾಮೀಜಿ ಹೇಳಿದರು.

ಇಲ್ಲಿಯ ವೆಂಕಟೇಶ ನಗರದಲ್ಲಿ ಮಹಾಲಕ್ಷ್ಮೀ ಕ್ಷೇಮಾಭಿವೃದ್ಧಿ ಸಂಘದಿಂದ ಶ್ರಾವಣ ಮಾಸದ ಅಂಗವಾಗಿ ಸೋಮವಾರ ಆರಂಭವಾದ ನವಲಗುಂದ ನಾಗಲಿಂಗೇಶ್ವರ ಮಹಾಪುರಾಣ ಹಾಗೂ ‘ಸಂಸ್ಕಾರ, ನೆಮ್ಮದಿಗಾಗಿ ಪುರಾಣ ಪ್ರವಚನ ಆಲಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ಜಿ.ಮೇಂಡೆಗಾರ ಮಾತನಾಡಿ, ‘ನಾವೆಲ್ಲರೂ ಜಗತ್ತು ನೋಡಲು ಬಂದವರು. ಈ ಜಗತ್ತನ್ನು ಆನಂದದಿಂದ ನೋಡಬೇಕು. ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸಾರ್ಥಕ ಜೀವನಕ್ಕೆ ಪುರಾಣ ಪ್ರವಚನಗಳು ಪೂರಕವಾಗಿವೆ’ ಎಂದರು.

ಅಕ್ಕಮಹಾದೇವಿ ಬುರ್ಲಿ ಅವರು ಶರಣರ ಅಮೃತ ವಚನ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷ ಬಸವರಾಜ ಶಿವಶರಣರ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಜೋತಿಬಾ ಚವ್ಹಾಣ ಹಿಟ್ನಳ್ಳಿ, ನಿವೃತ್ತ ಆಹಾರ ನಿರೀಕ್ಷಕ ಬಸವರಾಜ ಎಸ್.ಅಮೀನಗಡ, ಜಿ.ಎನ್.ನಾಟೀಕಾರ, ಮಹಾಲಕ್ಷ್ಮೀ ಕಮಿಟಿ ಸದಸ್ಯರಾದ ಡಿ.ಕೆ.ರಾಠೋಡ, ಚಂದ್ರಶೇಖರ ಮೈಲಿಕರ, ಹರಿದಾಸ ವಾಲಿಕಾರ, ಸಂತೋಷ ಮೈಲಿಕರ, ಅಶೋಕ ನಾಟೀಕಾರ, ರುದ್ರಪ್ಪ ಪಟ್ಟಣ, ಗೀರಿಶ ಕವಟಗಿ, ರಾಮು ವಾಘ್ಮೋರೆ, ಸುರೇಶ ದಶವಂತ ಇದ್ದರು.

ಗದಗ ಆಶ್ರಮದ ತಬಲಾ ವಾದಕ ಹಣಮಂತ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

Post Comments (+)