ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯತ್ತ ಮುಸ್ಲಿಂ ಹಾಸ್ಟೆಲ್‌ ಸಂಸ್ಥೆ

Last Updated 24 ಜೂನ್ 2019, 12:43 IST
ಅಕ್ಷರ ಗಾತ್ರ

ಶಿವಮೊಗ್ಗ:ಮೂರು ವರ್ಷದಲ್ಲಿ ಮುಸ್ಲಿಂ ಹಾಸ್ಟೆಲ್ ಸಂಸ್ಥೆ ಸಾಕಷ್ಟು ಪ್ರಗತಿಸಾಧಿಸಿದೆ. ಹಲವು ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ ಎಂದು ಸಾಧಿಸಿದೆ ಎಂದು ಮುಸ್ಲಿಂ ಹಾಸ್ಟೆಲ್ ಸಮಿತಿ (ವಕ್ಫ್) ಅಧ್ಯಕ್ಷ ಮಹಮದ್ ಆಸೀಫ್ ಹೇಳಿದರು.

2016ರಲ್ಲಿ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ₹82 ಸಾವಿರ ಮಾಸಿಕ ಆದಾಯ ಇದ್ದ ಸಮಿತಿ ಈಗ ₹2.25 ಲಕ್ಷ ಗಳಿಸುತ್ತಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸೋಲಾರ್ ವ್ಯವಸ್ಥೆ, ನೂತನ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮಸೀದಿಗೆ ಬರುವವರ ಅನುಕೂಲಕ್ಕಾಗಿ ಅಮೀರ್ ಅಹಮದ್ ಸಾಬ್ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಸಮಾಜದ ಬಡ ವಿದ್ಯಾರ್ಥಿಗಳಿಗೆ ₹6 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ. ಬ್ಯಾಂಕ್ ಸಾಲ ತೀರಿದೆ. ನಗರ ಪಾಲಿಕೆಗೆ ₹5.50 ಲಕ್ಷ ಕಂದಾಯ ಕಟ್ಟಲಾಗಿದೆ. ₹42 ಲಕ್ಷ ವೆಚ್ಚದಲ್ಲಿ ಹಲವು ಅಭಿವೃದ್ಧ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಮುಖಂಡರಾದ ಮಹಮದ್‌ ಸಲೀಂ, ಮಹಮದ್ ಆರೀಫ್, ಸೈಯದ್ ಮುಜೀಬುಲ್ಲಾ, ಶಮೂನ್ ಷರೀಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT