ಶನಿವಾರ, ಡಿಸೆಂಬರ್ 7, 2019
25 °C

ಶಿವಮೊಗ್ಗ | ಡಿ.5ರಿಂದ ನಮ್‌ ಟೀಮ್‌ ನಾಟಕಗಳ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಮ್ಮ ಟೀಮ್ ಡಿ.5 ಮತ್ತು 6ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕೋತ್ಸವ ಹಮ್ಮಿಕೊಂಡಿದೆ.

ಕಲಾವಿದ ಮಂಜು ಅವರ ನೆನಪಿನಲ್ಲಿ ಎರಡು ದಿನದ ನಾಟಕೋತ್ಸವ ನಡೆಯಲಿದೆ. ಡಿ.5ರಂದು ಮಹಾದೇವ ಹಡಪದ ಸಾಲಾಪುರ ಅವರ ನಿರ್ದೇಶನದ ಲೋಕಾಪುರ ಅವರು ರಚಿಸಿರುವ ಹಾಸ್ಯ ನಾಟಕ ‘ಸಂಕಾನಟ್ಟಿ ಚಂದ್ರಿ’ ಡಿ.6ರಂದು ಅಪೂರ್ವ ಅನಗಳ್ಳಿ ನಿರ್ದೇಶನದ ‘ಒಂದು ಲೋಕ ಕಥೆ’ ನಾಟಕ ಪ್ರದರ್ಶನಗೊಳ್ಳಲಿದೆ. ಎರಡು ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಆರಂಭಗೊಳ್ಳುತ್ತವೆ. ಒಂದು ನಾಟಕಕ್ಕೆ ₹ 50 ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದು ನಮ್ ಟೀಮ್‌ ಪ್ರದಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ನಮ್ ಟೀಮ್ ಎರಡು ದಶಕಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಕ್ರೀಯಾಶೀಲವಾಗಿದೆ. ಸುಮಾರು 38ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದೆ. 98ಕ್ಕೂ ಹೆಚ್ಚು ಆಹ್ವಾನಿತ ನಾಟಕಗಳಿಗೆ ಪ್ರೋತ್ಸಾಹ ನಿಡಿದೆ. ಡಿ.5 ಮತ್ತು 6 ರಂದು ನಡೆಯಲಿರುವ ನಾಟಕಗಳು ಆಹ್ವಾನಿತ 99 ಹಾಗೂ 100ನೇ ನಾಟಕಗಳು ಎಂದರು.

ಮಂಜಣ್ಣ ನಾಟಕ ತಂಡಗಳಿಗೆ ನೆರವಾಗಿದ್ದರು. ಅವರು ರೂಪಿಸಿದ್ದ ವೇದಿಕೆಗಳು ಇಂದು ನೆನಪಿನಲ್ಲಿವೆ. ಅವರ ಅಪರೂಪದ ಛಾಯಾಚಿತ್ರ ಪ್ರದರ್ಶನಕ್ಕೀ ಅವಕಾಶ ಕಲ್ಪಿಸಲಾಗಿದೆ. ಅವರ ಒಡನಾಡಿಗಳು ಇದರಲ್ಲಿ ಭಾಗವಹಿಸುತ್ತಾರೆ. ಡಿ.6ರಂದು ರಂಗ ಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಅವರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಮ್‌ಟೀಮ್‌ನ ಸುಂದರೇಶ್, ಸುರೇಶ್, ಚಂದನ, ವಿಜಯಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)