ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸಕ್ಷಮ ದ್ವಿತೀಯ ಸಮ್ಮೇಳನ

Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿಮಾರ್ಚ್ 12ರಂದುಬೆಳಿಗ್ಗೆ 11ಕ್ಕೆಸಕ್ಷಮ ಸಂಘಟನೆಯ ಜಿಲ್ಲಾ ದ್ವಿತೀಯ ಸಮ್ಮೇಳನ ಆಯೋಜಿಸಲಾಗಿದೆ.

ಅಂದುಬೆಳಿಗ್ಗೆ 10ಕ್ಕೆಶಿವಪ್ಪನಾಯಕ ವೃತ್ತದಿಂದ ‘ಐಕ್ಯತಾ ನಡಿಗೆ’ ಹೊರಡಲಿದೆ. ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್ ಚಾಲನೆ ನೀಡುವರು.ನೆಹರೂ ರಸ್ತೆ, ಗೋಪಿವೃತ್ತ, ಕಸ್ತೂರಿಬಾ ಕಾಲೇಜು ಮಾರ್ಗವಾಗಿ ಶಾಂತಲಾ ಸಭಾಂಗಣಕ್ಕೆ ಜಾಥಾ ತಲುಪಲಿದೆ ಎಂದುಸಕ್ಷಮ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಕೆ.ಜೆ.ಕುಮಾರ್ ಶಾಸ್ತ್ರಿಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಮ್ಮೇಳನವನ್ನು ಸಕ್ಷಮ ಅಖಿಲ ಭಾರತ ಕಾರ್ಯದರ್ಶಿಕಮಲಾಕಾಂತ ಪಾಂಡೆ ಉದ್ಘಾಟಿಸುವರು. ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಡಾ.ಕೆ.ಎಸ್. ಗಂಗಾಧರ್ ಕಿವುಡುತನ ಕುರಿತು, ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಮಕ್ಕಳ ಆರೋಗ್ಯದ ಕುರಿತು ಮಾತನಾಡುವರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಉಪಸ್ಥಿತರಿರುವರು ಎಂದರು.

ಮಧ್ಯಾಹ್ನ 12.15ಕ್ಕೆ ನಡೆಯುವ ವಿಚಾರಗೋಷ್ಠಿ 1ರಲ್ಲಿ ಅಂಗವಿಕಲರ ಅಧಿನಿಯಮ ಕಾಯ್ದೆ ಕುರಿತು ಸಕ್ಷಮ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಧೀಂದ್ರ ಮಾತನಾಡಲಿದ್ದಾರೆ. ಸಾಗರ ತಾಲ್ಲೂಕು ಸಮಿತಿ ಅಧ್ಯಕ್ಷ ವಿ. ಗಣೇಶ್ ಅಧ್ಯಕ್ಷತೆ ವಹಿಸುವರು. 12.45ಕ್ಕೆ ನಡೆಯುವ 2ನೇ ಗೋಷ್ಠಿಯಲ್ಲಿ ಅಂಗವಿಕಲ ಸವಲತ್ತುಗಳು ಮತ್ತು ಸವಾಲುಗಳು ಕುರಿತು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಕೆ.ವಿ.ರಾಜಣ್ಣ ಮಾತನಾಡುವರು. ಶಿವಮೊಗ್ಗದ ವಕೀಲರಾದ ಕವಿತಾ ಅಧ್ಯಕ್ಷತೆ ವಹಿಸುವರು ಎಂದು ವಿವರ ನೀಡಿದರು.

ಮಧ್ಯಾಹ್ನ 1.30ಕ್ಕೆ ನಡೆಯುವ ಸಮಾರೋಪದಲ್ಲಿ ಸಕ್ಷಮ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಯರಾಮ್ ಬೊಳ್ಳಾಜೆ ಸಮಾರೋಪ ಭಾಷಣ ಮಾಡುವರು. ಜಿಲ್ಲಾ ಸಂಘ ಚಾಲಕ ವೆಂಕಟೇಶ್ ಸಾಗರ, ನೇತ್ರ ತಜ್ಞ ಡಾ. ಪ್ರಶಾಂತ್ ಇಸ್ಲೂರ್ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಕ್ಷಮ ಜಿಲ್ಲಾ ಸಂಚಾಲಕ ಶಿವಕುಮಾರ್, ಓಂಗಣೇಶ್, ಮಲ್ಲಿಕಾರ್ಜುನ, ಸರಸ್ವತಿ, ಜ್ಯೋತಿ ಓಂಗಣೇಶ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT