ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

7

ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ

Published:
Updated:
ಬಸವನಬಾಗೇವಾಡಿಯಲ್ಲಿ ಗ್ರಾ.ಪಂ ನೌಕಕರ ಸಂಘ ತಾಲ್ಲೂಕು ಘಟಕದ ಸದಸ್ಯರು ಶನಿವಾರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾ.ಪಂ ಅಧಿಕಾರಿಗೆ ಮನವಿ ಸಲ್ಲಿಸಿದರು.

ಬಸವನಬಾಗೇವಾಡಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಗ್ರಾಮ ಪಂಚಾಯಿತಿ ನೌಕರರ ಸಂಘ ತಾಲ್ಲೂಕು ಘಟಕದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿ ನಂತರ ತಾ.ಪಂ. ಅಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್ ಶೇಖರಣಿ ಮಾತನಾಡಿ, ರಾಜ್ಯ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಿಷ್ಠ ವೇತನ ನೀಡುವಂತೆ ಆದೇಶ ಜಾರಿ ಮಾಡಿದ್ದರೂ, ನೌಕರರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ 50 ಸಾವಿರಕ್ಕೂ ಹೆಚ್ಚಿನ ಗ್ರಾ.ಪಂ. ನೌಕರರ ಸ್ಥಿತಿ ಚಿಂತಾಜನಕವಾಗಿದೆ. ಕೂಡಲೆ ಸರ್ಕಾರ ನಿಗದಿ ಪಡಿಸಿದಂತೆ ಗ್ರಾ.ಪಂ ನೌಕಕರ ಸಂಬಳವನ್ನು ಪಂಚತಂತ್ರದ ಮೂಲಕ ಬರುವಂತೆ ವ್ಯವಸ್ಥೆ ಮಾಡಬೇಕು. ಚರಂಡಿ ಸ್ವಚ್ಛಗೊಳಿಸುವವರು ಹಾಗೂ ವಾಟರ್‌ಮನ್‌ ಸೇರಿ ರಾಜ್ಯದ 17 ಸಾವಿರ ಗ್ರಾ.ಪಂ ನೌಕರರನ್ನು ಪಂಚತಂತ್ರದಲ್ಲಿ ಸೇರ್ಪಡೆ ಮಾಡುವುದು ಸೇರಿದಂತೆ ನೌಕರರ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಸಂಗಪ್ಪ ಸೀತಿಮನಿ, ಕಾರ್ಯದರ್ಶಿ ಶೇಖಪ್ಪ ಲಮಾಣಿ, ಎನ್.ಎಂ ಮಾದರ, ಬಿ.ಆರ್.ಓದಿ, ಎಸ್.ಜಿ.ಬಿರಾದಾರ, ಎಂ.ಎಸ್ ಲಮಾಣಿ, ಎನ್.ಐ.ಮಠ, ಸಿ.ಎಸ್.ಉಂಡಿ, ಎಂ.ಎಲ್.ಮದರಕಿ, ಎಸ್.ಕೆ.ಈಳಗೇರ, ಎಸ್.ಆರ್.ವಡ್ಡರ, ಎಂ.ಎಸ್ ಬಾವಿಕಟ್ಟಿ, ಎ.ಸಿ. ನಂದ್ಯಾಳ, ಎಸ್.ಜಿ.ಪೂಜಾರಿ, ಸಿ.ಎಂ.ಕುಂಬಾರ, ಡಿ.ಎಸ್.ಇನಾಮದಾರ, ಜಗದೀಶ ಬಾಗೇವಾಡಿ, ವೈ.ಬಿ.ಬಿರಾದಾರ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !