ಭಾನುವಾರ, ಜನವರಿ 19, 2020
28 °C

ಶಿವಮೊಗ್ಗ: ಕೊರಳಿಗೆ ಈರುಳ್ಳಿ ಹಾರ ಧರಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಅಧ್ಯಕ್ಷೆ ಅನಿತಾ ಕುಮಾರಿ ನೇತೃತ್ವದಲ್ಲಿ ಗುರುವಾರ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕೊರಳಿಗೆ ಈರುಳ್ಳಿ ಹಾರ ಧರಿಸಿ, ರಸ್ತೆಯಲ್ಲಿ ರಂಗೋಲಿ ಹಾಕಿದರು. ರಸ್ತೆಯಲ್ಲೇ ಅಡುಗೆ ಮಾಡಿ, ಪಾತ್ರೆಗಳನ್ನು ಬಡಿಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿ ಪರಿಣಾಮ ಬಡವರ ಬದುಕು ದುಸ್ತರವಾಗಿದೆ. ದಿನಬಳಕೆಯ ದಿನಸಿ ಸಾಮಗ್ರಿಗಳಾದ ಬೇಳೆ ಕಾಳು, ಅಡುಗೆ ಸಿಲಿಂಡರ್, ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ ಧರ್ಮಗಳ ಮಧ್ಯೆ ಕಿತ್ತಾಟ, ಅನಗತ್ಯ ಹೇಳಿಕೆಗಳು, ಕೋಮುವಾದ ಪ್ರಚೋದಿಸುವ ಕೆಲಸಗಳಲ್ಲಿ ತೊಡಗಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಆದರೂ ಸೂಕ್ತ ನೆರೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಸರ್ಕಾರದ ತಪ್ಪು ನಿರ್ಧಾರಗಳಿಂದ ಜನಜೀವನ ಕಷ್ಟವಾಗುತ್ತಿದೆ. ಉದ್ಯೋಗಗಳು ನಾಶವಾಗಿವೆ. ಆರ್ಥಿಕತೆ ಕುಸಿದಿದೆ. ಆಹಾರ ಸಾಮಾಗ್ರಿಗಳ ಬೆಲೆ ಏರುತ್ತಲೇ ಇದೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈಗಾಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ ಬಂಡಿ, ಪಕ್ಷದ ಮುಖಂಡರಾದ ಸುವರ್ಣಾ ನಾಗರಾಜ್, ರೂಪಾ ನಾರಾಯಣ, ರೇಷ್ಮಾ, ಫಾಮಿದಾ ಬೇಗಂ, ಕವಿತಾ, ಮಂಜುಳಾ, ರಂಗಮ್ಮ, ನಿರ್ಮಲಾ, ಪುಷ್ಪಲತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು