ಪಟ್ಟಣದ ವ್ಯಾಪ್ತಿಗೆ ಗುಂಜಳ್ಳಿ ಕ್ಯಾಂಪ್, ಶ್ರೀನಿವಾಸ ಕ್ಯಾಂಪ್, ಬಸಣ್ಣ ಕ್ಯಾಂಪ್, ಮಧ್ಯಕ್ಯಾಂಪ್‌ಗಳಲ್ಲಿ ಒಟ್ಟು 20 ಸಾವಿರ ಜನರು ಸೇರಿದಂತೆ ಹೋಬಳಿ ವ್ಯಾಪ್ತಿಯ 20 ಹಳ್ಳಿಗಳಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಇದೆ. ಆದರೆ ಕಳೆದ 6 ತಿಂಗಳಿಂದ ಆಧಾರ್ ಸೇವಾ ಕೇಂದ್ರ ಮುಚ್ಚಿದ್ದರಿಂದ ಜನರು ಸರ್ಕಾರಿ ಸೇವೆ ಪಡೆಯಲು ಹಾಗೂ ಮಕ್ಕಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗಿದೆ.