ಬುಧವಾರ, ಜೂನ್ 23, 2021
30 °C

ವಿವಿಧೆಡೆ ಅಂಬೇಡ್ಕರ್‌ ಭಾವಚಿತ್ರಕ್ಕೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ತಾಲ್ಲೂಕಿನ ವಿವಿಧೆಡೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಪಟ್ಟಣದ ಇಂದಿರಾನಗರದ ಮುಂಭಾಗದಲ್ಲಿನ ಅಂಬೇಡ್ಕರ್ ನಾಮಫಲಕ್ಕೆ ದಲಿತ ಸಂಘಟನೆಗಳಿಂದ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ದಲಿತ ಮುಖಂಡರಾದ ಅಬ್ರಾಹಂ ಹೊನ್ನಟಗಿ, ಜಯಪ್ಪ, ಅಜಿತ್ ಹೊನ್ನಟಗಿ, ಹನುಮಂತ, ಮೌನೇಶ, ಗುಂಡಪ್ಪ ಸೇರಿದಂತೆ ದಲಿತ ಮುಖಂಡರು, ಯುವಕರು ಇದ್ದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಪಟ್ಟಣ ಬಸವೇಶ್ವರ ಕಾಲೇಜಿನಲ್ಲಿ ಅಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ವಿಎಸ್ಎಸ್ಎನ್ ನಲ್ಲಿ ಅಧ್ಯಕ್ಷ ಚನ್ನೂರು ಚನ್ನಬಸವ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಸುನೀಲ್ ಸರೋದೆ ಅಂಬೇಡ್ಕರ್ ಭಾವಚಿತ್ರ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಡಾ.ಪರಿಮಳಾ ಮೈತ್ರಿ, ಶ್ರೀದೇವಿ, ಗುರುಪಾದ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.ರವಿ: ಹರವಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಂಖಡ ಬಸನಗೌಡ ದಳಪತಿ ಅಂಬೇಡ್ಕರ್ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಅದ್ಯಕ್ಷೆ ಗೌರಮ್ಮ ತಿಮಯ್ಯ ನಾಯಕ, ಎಚ್ ಮರಿಸಿದ್ದಪ್ಪ , ಗೋಪಾಲ ನಾಯಕ ಹರವಿ, ಎಸ್.ಬಸ್ಸಪ್ಪ ಗೌಡ, ಪಂಪಣ್ಣ ತಾತ, ಜೆ.ಮಾರಪ್ಪ, ಬಸವರಾಜ ಶಿಕ್ಷಕ, ಭೀಮಣ್ಣ ನಾಯಕ, ಬಿ‌.ಶಿವರಾಜ ನಾಯಕ, ಬಸಪ್ಪ ಮೇಸ್ತ್ರಿ, ರಾಮಪ್ಪ, ಶರಣಬಸವ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು