ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯರ ದರ್ಶನ ಪಡೆದ ಅಣ್ಣಾಮಲೈ

Published 25 ಮೇ 2024, 16:14 IST
Last Updated 25 ಮೇ 2024, 16:14 IST
ಅಕ್ಷರ ಗಾತ್ರ

ರಾಯಚೂರು: ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಮಂತ್ರಾಲಯಕ್ಕೆ ಶನಿವಾರ  ಭೇಟಿ ನೀಡಿ ರಾಘವೇಂದ್ರ ಸ್ವಾಮಿಗಳ ಬೃಂದಾವನದ ದರ್ಶನ ಪಡೆದರು.

ಮೊದಲಿಗೆ ಮಂಚಾಲಮ್ಮದೇವಿಯ ದರ್ಶನ ಪಡೆದು ಆನಂತರ ಇತರ ಪವಿತ್ರ ಬೃಂದಾವನಗಳ ದರ್ಶನ ಮಾಡಿದರು. ದರ್ಶನದ ಬಳಿಕ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಪಾದಂಗಳವರು ಕೆ.ಅಣ್ಣಾಮಲೈ ಅವರಿಗೆ ಫಲಮಂತ್ರಾಕ್ಷತೆ, ಶೇಷ ವಸ್ತ್ರ, ಸ್ಮರಣಿಕೆ ನೀಡಿ  ಆಶೀರ್ವದಿಸಿದರು.

ಶ್ರೀಮಠದ ವ್ಯವಸ್ಥಾಪಕ ಎಸ್.ಕೆ ಶ್ರೀನಿವಾಸರಾವ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT