‘ಅಟಲ್‌ಜೀ ದೇಶಪ್ರೇಮ ಅಮರ’

7

‘ಅಟಲ್‌ಜೀ ದೇಶಪ್ರೇಮ ಅಮರ’

Published:
Updated:
Deccan Herald

ರಾಯಚೂರು: ಅಜಾತಶತ್ರು ಎಂದೇ ಪ್ರಖ್ಯಾತರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೈಹಿಕವಾಗಿ ಎಲ್ಲರನ್ನು ಅಗಲಿದರೂ ಅವರ ರಾಷ್ಟ್ರಪ್ರೇಮ ಅಮರವಾಗಿದೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಭೆ ಮಾತನಾಡಿದರು.

ಅಟಲ್‌ಜೀ ರಾಜಕೀಯದಲ್ಲಿದ್ದರೂ ಸಾಹಿತ್ಯಾಸಕ್ತರು, ಕವಿಗಳಾಗಿದ್ದರು. ಎಲ್ಲ ಜನ ಸಮುದಾಯಕ್ಕೆ ಅವರು ಬೇಕಾಗಿದ್ದರು. ಸಂಸತ್ ಅಧಿವೇಶನದಲ್ಲಿ ಯಾವುದೇ ವಿಷಯ ಕುರಿತು ಮಾತನಾಡಲು ಎದ್ದು ನಿಂತರೆ ಇಡೀ ಸದನವೇ ಅವರ ಭಾಷಣವನ್ನು ಕಿವಿಕೊಟ್ಟು ಆಲಿಸುತ್ತಿತ್ತು. ಉತ್ತಮ ವಾಗ್ಮಿಗಳು ರಾಜಕೀಯ ಚಾಣಾಕ್ಷರಾಗಿದ್ದರು ಎಂದರು.

ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಸ್ಕೋಪ್ ರಸ್ತೆ ನಿರ್ಮಾಣಕ್ಕೆ ತಿಲಾಂಜಲಿ ನೀಡಿದರು. ದೇಶದ ಅಭಿವೃದ್ಧಿಗೆ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದರು. ಅವರ ಜೀವನವೇ ನಮಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಶಿವಬಸಪ್ಪ ಮಾಲಿಪಾಟೀಲ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ಮುನ್ನಡೆಯಬೇಕು. 1982ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಟಲ್‌ಜೀ ನಗರಕ್ಕೆ ಆಗಮಿಸಿದ್ದರು. ಸ್ಥಳೀಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಭಾಷಣ ಕೇಳಲು ಜನಸಾಗರವೇ ಹರಿದು ಬಂದಿತ್ತು ಎಂದು ಮೆಲುಕು ಹಾಕಿದರು.

ರಾತ್ರಿ 12 ಗಂಟೆಯಾದರೂ ಜನರು ಕಾಲ್ಕಿತ್ತದೆ ಭಾಷಣ ಆಲಿಸಿದರು. ಸಾಹಿತ್ಯ ಹಾಗೂ ಕವಿಗಳಾಗಿದ್ದರು. ಅತ್ಯುತ್ತಮ ಕವನಗಳನ್ನು ತಮ್ಮದೇ ಆದ ಶೈಲಿಯಲ್ಲಿ ಬರೆಯುತ್ತಿದ್ದರು. ಅವರು ಬರೆದ ಕವನಗಳು ಇಂದಿಗೂ ಅಚ್ಚಳಿಯದ ಉಳಿಯುವಂತಾಗಿದೆ ಎಂದರು.

ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನ ಆಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.

ಮುಖಂಡ ಆರ್. ತಿಮ್ಮಯ ಮಾತನಾಡಿದರು. ಜಿಲ್ಲಾಧ್ಯಕ್ಷ ಶರಣಗೌಡ ಜಾಡಲದಿನ್ನಿ, ಮಾಜಿ ಶಾಸಕರಾದ ಪಾಪಾರೆಡ್ಡಿ, ರಾಜಕುಮಾರ್ ಅರಿವಿನ, ನಾಗನಗೌಡ, ಡಾ. ಬಸನಗೌಡ ಪಿ .ಪಾಟೀಲ, ನರಸಪ್ಪ ಯಕ್ಲಾಸಪುರ, ಆಂಜನೇಯ, ರವೀಂದ್ರ ಜಲ್ದಾರ್ ಎನ್. ಕೇಶವರೆಡ್ಡಿ , ಶಶಿರಾಜ್ ಮಸ್ಕಿ, ಶ್ರೀನಿವಾಸರೆಡ್ಡಿ, ಎ. ಚಂದ್ರಶೇಖರ್‌, ಯು. ಆಂಜನೇಯ, ಬಿ. ನಾಗೇಶ್, ಟಿ. ಮಲ್ಲೇಶ್, ತಿರುಮಲ ರೆಡ್ಡಿ , ಸುಲೋಚನಾ ಬಸವರಾಜ್ ಸ್ವಾಮಿ, ಮಹೇಂದ್ರ ರೆಡ್ಡಿ , ಎಸ್.ರಾಜು, ಜೆ.ಎ.ಮೌನೇಶ್, ವಾಸು, ಶಶಿರಾಜ್, ಜಿ ರಮೇಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !