ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳಿಗೆ ಅರಿವು ಕಾರ್ಯಕ್ರಮ
Last Updated 2 ಫೆಬ್ರುವರಿ 2021, 12:33 IST
ಅಕ್ಷರ ಗಾತ್ರ

ರಾಯಚೂರು: ನಗರದ ಸ್ವಚ್ಛತೆ, ಸೌಂದರ್ಯೀಕರಣದ ಜವಾಬ್ದಾರಿ ಹೊತ್ತಿದ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ತಮ್ಮ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿಕೊಂಡು ಕೆಲಸ ಮಾಡಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಸಲಹೆ ನೀಡಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳು, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಕಾರ್ಯ ಅನನ್ಯವಾದುದು. ಬೆಳಿಗ್ಗೆಯೇ ನಗರದ ಸ್ವಚ್ಛತೆಯ ಕೆಲಸಕ್ಕೆ ಹಾಜರಾಗುವುದು ಸಾಮಾನ್ಯ ವಿಷಯವಲ್ಲ. ಅವರ ಶ್ರಮ ಮಕ್ಕಳಿಗೆ ತಿಳಿಸುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸಬೇಕು. ನಗರ ಅಥವಾ ಗ್ರಾಮದ ಸೌಂದರ್ಯೀಕರಣಕ್ಕೆ ಅಧಿಕಾರಿಗಳ ಕಾರ್ಯಕ್ಕಿಂತ ಪೌರಕಾರ್ಮಿಕರ ಶ್ರಮವೇ ಮುಖ್ಯವಾಗಿದೆ. ಅವರ ಸೇವೆಯಿಂದ ನಗರಕ್ಕೆ ಕೀರ್ತಿ ಬರುವುದು ಎಂದರು.

ಮ್ಯಾನ್ಯುಯಲ್ (ಮಲಹೊರುವ) ಪದ್ದತಿ ಸುಪ್ರೀಂಕೋರ್ಟ್ ರದ್ದುಪಡಿಸಿದ್ದು, ಪುಡಿಗಾಸಿಗೆ ಯಾರು ಗುಂಡಿಗಳಿಗೆ ಇಳಿದು ಸ್ವಚ್ಛಗೊಳಿಸುವ ಕೆಲಸ ಮಾಡಬಾರದು. ಇದಕ್ಕೆ ಯಾರಾದರೂ ಒತ್ತಾಯ ಮಾಡಿದ್ದಲ್ಲಿ ಸ್ಥಳೀಯ ಆಡಳಿತಕ್ಕೆ ದೂರು ನೀಡಬೇಕು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅಪಾಯಕಾರಿ ಕೆಲಸವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ತಮ್ಮ ಕರ್ತವ್ಯದ ಜೊತೆಗೆ ಸರ್ಕಾರದ ನಿಯಮ, ಕಾಯ್ದೆಗಳ ಬಗ್ಗೆ ಅರಿತುಕೊಂಡು ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷ ಇ. ವಿನಯಕುಮಾರ್‌ ಮಾತನಾಡಿ, ‘ಪೌರಕಾರ್ಮಿಕರು ಮಾಡುವ ಕೆಲಸ ದೇವರ ಕೆಲಸ. ಬೆಳಿಗ್ಗೆ ನಾವು ಏಳುವ ಮುನ್ನವೇ ಅವರಿಂದ ಸ್ವಚ್ಛತಾ ಕೆಲಸ ಶುರುವಾಗಿರುತ್ತದೆ ಎಂದರು.

ನಗರಸಭೆ ಕಾನೂನು ತಜ್ಞ ಸಿ.ಎ ರಬ್ ಮಾತನಾಡಿ, ಸರ್ಕಾರದಿಂದ ಮಲಹೊರುವ ಪದ್ದತಿ ರದ್ದುಗೊಳಿಸಲಾಗಿದೆ. ಅದು ಶಿಕ್ಷಾರ್ಹ ಅಪರಾಧವಾಗಿದೆ. ಸಫಾಯಿ ಕರ್ಮಚಾರಿ, ಪೌರಕಾರ್ಮಿಕರು ಸರ್ಕಾರದಿಂದ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅದನ್ನು ಅರಿತುಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಸರೋಜಾ ಅವರು ಕೈತೊಳೆದುಕೊಳ್ಳುವ ವಿಧಾನದ ಪ್ರಾತ್ಯಾಕ್ಷಿಕೆ ತೋರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶಕುಮಾರ, ತಾಲ್ಲೂಕಾಧಿಕಾರಿ ರಮೇಶಕುಮಾರ, ಪೌರಾಯುಕ್ತ ವೆಂಕಟೇಶಕುಮಾರ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಈಶ್ವರಪ್ಪ ಕಟ್ಟಿಮನಿ, ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಗೀತಾಸಿಂಗ್, ನಗರಸಭೆ ಸದಸ್ಯ ದರೂರ್ ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT