ಕವಿತಾಳ: ಇಲ್ಲಿಗೆ ಸಮೀಪದ ಆನಂದಗಲ್ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಉಟಕನೂರು ಅಡವಿ ಸಿದ್ದೇಶ್ವರ ಮಠದ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ, ಮಸ್ಕಿ ಗಚ್ಚಿನ ಹಿರೇಮಠದ ವರರುದ್ರಮುನಿ ಸ್ವಾಮೀಜಿ ಅವರು ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪೂಜಾ ಕಾರ್ಯ ನಡೆಸಿಕೊಟ್ಟರು.

ನವಗ್ರಹ ಪೂಜೆ, ಮಹಾ ರುದ್ರಾಭಿಷೇಕ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ತಾತಪ್ಪನ ಗದ್ದುಗೆಯಿಂದ ದೇವಸ್ಥಾನದ ವರೆಗೆ ಡೊಳ್ಳು, ಬಾಜಾ–ಭಜಂತ್ರಿ ಮತ್ತಿತರ ಮಂಗಳವಾದ್ಯ, ಪೂರ್ಣಕುಂಭ– ಕಳಸ, ಬಸವಣ್ಣನವರ ಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಮಕ್ಕಳು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ನಾಗನಗೌಡ, ಬಸನಗೌಡ ಪಾಟೀಲ, ಶರಣಪ್ಪ ಕಲಂಗೇರ, ಪಂಪಾಪತಿ ತುಮಕೂರು, ವೀರನಗೌಡ ಪಾಟೀಲ, ಅಂಬಣ್ಣ ದಿನ್ನಿ, ಶಿವಪುತ್ರಪ್ಪ ಹೊನ್ನಳ್ಳಿ, ಶರಣಪ್ಪ, ವೀರೇಶ ಕಲಂಗೇರ, ಪ್ರಭುಗೌಡ ಪಾಟೀಲ, ವೆಂಕಟೇಶ, ಅಖಂಡೇಶ್ವರ ಸೂಗೂರು, ಹುಚ್ಚರಡ್ಡಿ ತುಮಕೂರು ಮತ್ತಿತರರು ಉಪಸ್ಥಿತರಿದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.