ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡಲ್ಲಿ ಕನ್ನಡ ಶಾಲೆಗೆ ಕುತ್ತು?

ಗಡಿಭಾಗ ತೆಲಂಗಾಣದಲ್ಲಿವೆ 13 ಕನ್ನಡ ಮಾಧ್ಯಮ ಶಾಲೆಗಳು
Last Updated 4 ನವೆಂಬರ್ 2020, 12:00 IST
ಅಕ್ಷರ ಗಾತ್ರ

ಶಕ್ತಿನಗರ: ಕರ್ನಾಟಕದಲ್ಲಿ ರಾಜ್ಯೋತ್ಸವ ಸಂಭ್ರಮ ಗರಿಗೆದರಿದ ಹೊತ್ತಿನಲ್ಲೇ ಶಕ್ತಿನಗರದ ಗಡಿಭಾಗದಲ್ಲಿರುವ ತೆಲಂಗಾಣದ ಕನ್ನಡ ಮಾಧ್ಯಮ ಶಾಲೆಯನ್ನು ಮುಚ್ಚುವ ಪ್ರಯತ್ನ ಆರಂಭವಾಗಿದೆ. ಅಲ್ಲಿರುವ ಕನ್ನಡ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಮೆಹಬೂಬ್‌ನಗರ ಜಿಲ್ಲೆಯ ಮಾಗನೂರು ಮಂಡಲದ ಗಡಿಯಾಚೆಗೆ ತೆಲಂಗಾಣದಲ್ಲಿರುವ 13 ಗಡಿ ಗ್ರಾಮಗಳು ಸೇರಿ ಒಟ್ಟು ಲಕ್ಷ ಸಂಖ್ಯೆಯಲ್ಲಿ ಕನ್ನಡಗರಿದ್ದಾರೆ. ಮನೆ ಮನೆಗಳಲ್ಲಿ ಅವರಿಗೆ ಕನ್ನಡವೇ ಅಧಿಕೃತ ಭಾಷೆ , ಕಚೇರಿ ವ್ಯವಹಾರಕ್ಕೆ ಅನಿವಾರ್ಯವಾಗಿ ತೆಲುಗು ಬಳಕೆ ಮಾಡುತ್ತಿದ್ದಾರೆ.

ಗದ್ವಾಲ್, ಮಹೆಬೂಬ್‌ ನಗರ ಹಾಗೂ ನಾರಾಯಣ ಪೇಟೆ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕೃಷ್ಣಾ ಮತ್ತು ಅದರ ಸುತ್ತಲಿನ 13 ಗ್ರಾಮಗಳ ಜನರು, 1968ರಿಂದಲೇ ಗಡಿನಾಡು ಎಂದು ಘೋಷಿಸಿ ಮೀಸಲು ಕಲ್ಪಿಸಲು ಒತ್ತಾಯಿಸಿ ಹೋರಾಟ ಮಾಡಿದ್ದರ ಫಲವಾಗಿ 2011ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರ, ಈ ಪ್ರದೇಶವನ್ನು ಗಡಿನಾಡು ಎಂದು ಘೋಷಿಸಿ ರಾಜ್ಯಪತ್ರ ಪ್ರಕಟಿಸಿತ್ತು.

ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಗೆ ಹೊಂದಿಕೊಂಡ ಕರ್ನಾಟಕದ ಗ್ರಾಮಗಳಲ್ಲಿ ಕನ್ನಡ ಭಾಷೆ, ಇನ್ನೂ ಕಲಿಯುವ ಹಂತದಲ್ಲಿಯೇ ಉಳಿದಿರುವುದು ಅಚ್ಚರಿ ಎಂದೆನಿಸಿದರೂ ವಾಸ್ತವ ಸತ್ಯ. ಗಡಿನಾಡು ಕನ್ನಡಿಗರಿಗೆ ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯ ಸಿಗಲಿಲ್ಲ. ಇದರಿಂದ ಬೇಸತ್ತ ಇಲ್ಲಿನ ಕನ್ನಡಿಗರಲ್ಲಿ ಕೆಲವರು, ಕನ್ನಡ ಸರ್ಕಾರದ ಸ್ಪಂದನೆಗೆ ಕಾಯುವುದು ವ್ಯರ್ಥವೆಂದು ತೆಲುಗು ಇಲ್ಲವೇ ಆಂಗ್ಲ ಮಾಧ್ಯಮದ ಮೊರೆ ಹೋಗಿದ್ದಾರೆ.

ಗಡಿಭಾಗದ ಒಟ್ಟು 13 ಶಾಲೆಗಳಲ್ಲಿ 6 ಕನ್ನಡ ಶಾಲೆಗಳು ಮುಚ್ಚಿವೆ. ಕೆಲ ವರ್ಷಗಳ ಹಿಂದೆ 3 ಸಾವಿರ ವಿದ್ಯಾರ್ಥಿಗಳು ಕನ್ನಡ ಕಲಿಯುವವರ ಸಂಖ್ಯೆ ಇತ್ತು. ಈಗ ಅರ್ಧದಷ್ಟು ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ. ಇದರಿಂದ ಗಡಿನಾಡ ಕನ್ನಡ ಸಂಘ ತೀವ್ರ ಆತಂಕಗೊಂಡಿದೆ.

ಹೊರ ರಾಜ್ಯದ ಕನ್ನಡಿಗರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ, ಆಯಾ ರಾಜ್ಯ ಸರ್ಕಾರಗಳು ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಆಧಾರದ ಮೇಲೆ ಪ್ರವೇಶಾವಕಾಶ ಕಲ್ಪಿಸಬೇಕು. ಶಕ್ತಿನಗರ ಮತ್ತು ರಾಯಚೂರು ತೆರಳಲು, ತೆಲಂಗಾಣದ ಕೃಷ್ಣಾ ಗ್ರಾಮದಿಂದ ಸಾರಿಗೆ ಸೌಕರ್ಯ ಜೊತೆಗೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಒದಗಿಸಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆಗಳು ಗಡಿನಾಡ ಕನ್ನಡಿಗರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT