ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಜಿಲ್ಲೆಗೆ ಹೆಚ್ಚಿನ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲ; ಕುಮಾರ

Published 31 ಮಾರ್ಚ್ 2024, 15:57 IST
Last Updated 31 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ರಾಯಚೂರು: ‘ಕೇಂದ್ರ ಸರ್ಕಾರ ರಾಯಚೂರನ್ನು ಮಹಾತ್ವಾಕಾಂಕ್ಷಿ ಜಿಲ್ಲೆಯಾಗಿ ಆಯ್ಕೆ ಮಾಡಿದರೂ ಹೆಚ್ಚಿನ ಅನುದಾನ ನೀಡುವಲ್ಲಿ ವಿಫಲವಾಗಿದೆ.ಹಿಂದುಳಿದ ಭಾಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ‘ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ಆರೋಪ ಮಾಡಿದರು.

ಇಲ್ಲಿಯ ನಗರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ಜಿಲ್ಲೆಯ ಅಭಿವೃದ್ಧಿಗೆ ಕೆಲಡ ಮಾಡಲು ಆರ್ಯವೈಶ್ಯ ಸಮಾಜದವರು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

‘ಏಮ್ಸ್ ಮಂಜೂರು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲು ಹಿಂದೇಟು ಹಾಕುತ್ತಿದೆ’ ಎಂದು ತಿಳಿಸಿದರು.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ಮಾತನಾಡಿ, ‘ಕಾಂಗ್ರೆಸ್ ಅಭ್ಯರ್ಥಿ‌ ಕುಮಾರ ನಾಯಕ ಅವರಿಗೆ ಆಡಳಿತ ಅನುಭವ ಇದೆ. ಈ ಭಾಗದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾವಿತ್ರಿ ಪುರುಷೋತ್ತಮ ಹಾಗೂ ಕೆ ಶಾಂತಪ್ಪ  ಮಾತನಾಡಿ,  ‘ಏಮ್ಸ್ ಗಾಗಿ ನಾವು ನಿರಂತರ ಹೋರಾಟ ಮಾಡುತ್ತಿದ್ದೇವೆ. ಕುಮಾರ ನಾಯಕ್ ಅವರು ಮಾಜಿ ಐಎಎಸ್ ಅಧಿಕಾರಿಯಾಗಿರುವದರಿಂದ ಸಂಸತ್ತನಲ್ಲಿ ಮಾತನಾಡುವ ಶಕ್ತಿ ಇದೆ. ಅವರನ್ನು ನಾವೆಲ್ಲರು ಒಗ್ಗಟ್ಟಾಗಿ ಬೆಂಬಲಿಸಬೇಕಿದೆ’ ಎಂದು ತಿಳಿಸಿದರು.

ಇಲ್ಲೂರು ಅನಂತ ಗೋಪಾಲ್, ಸಾವಿತ್ರಿ ಪುರುಷೋತ್ತಮ, ಪದ್ಮರಾಜ್ ಅಯ್ಯ, ಜಯಂತರಾವ್ ಪತಂಗೆ, ಎಂ. ಆರ್. ದತ್ತು, ಕೆ ಶಾಂತಪ್ಪ, ಬಸವರಾಜ ರಡ್ಡಿ, ಜಿ ಶಿವಮೂರ್ತಿ, ಚಾಗಿ ವೆಂಕಟೇಶ, ಚಿತ್ರಾಲ್ ರಮೇಶ, ರುದ್ರಪ್ಪ ಅಂಗಡಿ, ಬಸವರಾಜ ರಡ್ಡಿ, ವಿನೋದ್ ಕುಮಾರ ಉಪಸ್ಥಿತರಿದ್ದರು.

ವೀರಶೈವ ಸಮಾಜದ ಮುಖಂಡರೊಂದಿಗೆ ಸಭೆ

‘ನಾನು ರಾಯಚೂರು ಜಿಲ್ಲೆಗೆ ಹೊಸಬನಲ್ಲ. ನಿಮ್ಮೆಲ್ಲರ ಸಹಕಾರದೊಂದಿಗೆ ರಾಯಚೂರು ಜಿಲ್ಲಾಧಿಕಾರಿಯಾಗಿ 3 ವರ್ಷ ಸೇವೆ ಮಾಡಿದ್ದೇನೆ. ಇನ್ನು ಹೆಚ್ಚಿನ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಅಗತ್ಯವಿದೆ‘ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಜಿ ಕುಮಾರ ನಾಯಕ ಮನವಿ ಮಾಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದ ಕಾರ್ಯಾಲಯದಲ್ಲಿ  ವೀರಶೈವ ಲಿಂಗಾಯತ ಮುಖಂಡರೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಮುಖಂಡರಾದ ವೀರಶೈವ ಸಮಾಜದ ಕಾರ್ಯಾಧ್ಯಕ್ಷ ಹರವಿ ನಾಗನಗೌಡ, ಉಪಾದ್ಯಕ್ಷರಾದ ಅಶೋಕಕುಮಾರ ಪಾಟೀಲ, ಕಾರ್ಯದರ್ಶಿ ವಿರಪನಗೌಡ ಬಂಡಿ,  ಬಸವರಾಜ ರಡ್ಡಿ, ಶರಣರಡ್ಡಿ, ಕಲ್ಲಯ್ಯ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಕೆ‌ ಶಾಂತಪ್ಪ ವಿಜಯ ಭಾಸ್ಕರ್, ಆನಂದ ಪಾಟೀಲ, ಚನ್ನಬಸವ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಬಸವರಾಜ ಪಾಟೀಲ ಅತ್ತನೂರು, ರಾಘವೇಂದ್ರ ಉಪಸ್ಥಿತರಿದ್ದರು.


ಏಮ್ಸ್‌ ಹೋರಾಟಗಾರರ ಭೇಟಿ

‘ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ ಏಮ್ಸ್ ಮಂಜೂರು ಜೊತೆಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾಗಿದೆ. ನನ್ನನ್ನು ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು ಈ ಭಾಗದ ಸೇವೆ  ಮಾಡುವ ಶಕ್ತಿ ನನ್ನಲ್ಲಿದೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಮಾರ ನಾಯಕ ತಿಳಿಸಿದರು.

ರಾಯಚೂರು ನಗರದಲ್ಲಿ 689 ದಿನಗಳಿಂದ ಸುಧೀರ್ಘವಾಗಿ ಏಮ್ಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವದಿ ಹೋರಾಟ ಸ್ಥಳಕ್ಕೆ ಭೇಟಿ ಮಾಡಿ ಮಾತನಾಡಿದರು.

ಸಚಿವ ಎನ್. ಎಸ್.ಬೋಸರಾಜು, ಹೋರಾಟಗಾರರಾದ ಅಶೋಕಕುಮಾರ ಜೈನ್, ಎಂ ಆರ್ ಬೇರಿ, ಅನಿತಾ ಬಸವರಾಜ, ಬಸವರಾಜ, ಬಾಬು ರಾವ್ ಸೇಗುಣಿಸಿ, ಕಾಂಗ್ರೆಸ್ ಮುಖಂಡರಾದ ಕೆ ಶಾಂತಪ್ಪ, ಜಿ ಶಿವಮೂರ್ತಿ, ರುದ್ರಪ್ಪ ಅಂಗಡಿ ತಾಯನಗೌಡ, ಬಸವರಾಜ ಪಾಟೀಲ್ ಅತ್ತನೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT