ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಏಳಿಗೆಗೆ ಪೋಷಕರ ಸಹಕಾರ ಅಗತ್ಯ’

Published 30 ಜುಲೈ 2023, 11:12 IST
Last Updated 30 ಜುಲೈ 2023, 11:12 IST
ಅಕ್ಷರ ಗಾತ್ರ

ಸಿರವಾರ: ‘ಮಕ್ಕಳ ಏಳಿಗೆಗೆ ಪೋಷಕರ ಸಹಕಾರ ಅಗತ್ಯ’ ಎಂದು ಶಾಂತಿನಿಕೇತನ ಶಾಲೆಯ ಪ್ರಾಚಾರ್ಯೆ ಯು.ಅನುರಾಧಾ ಹೇಳಿದರು.

ಪಟ್ಟಣದ ಶಾಂತಿನಿಕೇತನ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಂತಿನಿಕೇತನ ಪ್ರೌಢಶಾಲೆಯ ಸಹಯೋಗದಲ್ಲಿ ಭಾನುವಾರ ಸ್ಕೌಟ್ಸ್, ಗೈಡ್ಸ್‌ನ ಕಬ್ಸ್ ಮತ್ತು ಬುಲ್-ಬುಲ್ಸ್ ಘಟಕಗಳ ಉದ್ಘಾಟನೆ ಮತ್ತು ಪೋಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಂತಿನಿಕೇತನ ಶಾಲೆ ಅಧ್ಯಕ್ಷ ಎ.ಬಸವಲಿಂಗಪ್ಪ ಸಾಹುಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈಚೆಗೆ ಕೊಪ್ಪಳದಲ್ಲಿ ನಡೆದ ಮೂಲ ತರಬೇತಿ ಪಡೆದ ದಳನಾಯಕರ ಮೂಲಕ ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಶಾಲೆಯ ಕಬ್ಸ್ ಮತ್ತು ಬುಲ್-ಬುಲ್ಸ್ ಘಟಕಗಳನ್ನು ಉದ್ಘಾಟಿಸಲಾಯಿತು.

ಸ್ಕೌಟ್ಸ್ ಗೈಡ್ಸ್‌ನ ರಾಯಚೂರು ಮುಖ್ಯ ಆಯುಕ್ತ ಬಸವರಾಜ ಬೋರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣ ನಿವೃತ್ತ ಅಧಿಕಾರಿ ಪ್ರಕಾಶ ರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಯ್ಯನಗೌಡ ಐರೆಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಾಷಾ, ಶಿವಶರಣಪ್ಪ ವಕೀಲರು ಲಕ್ಕಂದಿನ್ನಿ, ಅಂಬಣ್ಣ ನಾಯಕ ಮ್ಯಾಕಲ್, ಸ್ಕೌಟ್ ಮಾಸ್ಟರ್ ಹನುಮೇಶ, ಫ್ಲಾಕ್ ಲೀಡರ್ ಉಮಾದೇವಿ ಮತ್ತು ಕಬ್ಸ್, ಬುಲ್-ಬುಲ್ಸ್, ಸ್ಕೌಟ್ಸ್, ಗೈಡ್ಸ್ ಮಕ್ಕಳು ಹಾಗೂ ಪಾಲಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT