ಶನಿವಾರ, ಸೆಪ್ಟೆಂಬರ್ 25, 2021
22 °C

ತುರ್ವಿಹಾಳ: ಶಾಲೆ ಪ್ರಯೋಗಾಲಯದ ಬೀಗ ಮುರಿದು 10 ಕಂಪ್ಯೂಟರ್ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರ್ವಿಹಾಳ: ಕಳ್ಳರು ಶನಿವಾರ ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಪ್ರಯೋಗಾಲಯದ ಬೀಗ ಮುರಿದು ₹3.5 ಲಕ್ಷ ಮೌಲ್ಯದ 10 ಕಂಪ್ಯೂಟರ್‌ಗಳನ್ನು ಕಳವು ಮಾಡಿದ್ದಾರೆ.

‘ಶುಕ್ರವಾರ ಸಂಜೆ ಕೊಠಡಿಗೆ ಎರಡು ಬೀಗ ಹಾಕಿದ್ದೆವು. ಶನಿವಾರ ಬೆಳಿಗ್ಗೆ 8.30 ಕ್ಕೆ ಶಾಲೆಗೆ ಬಂದಾಗ ಘಟನೆ ನಡೆದಿರುವುದು ತಿಳಿಯಿತು. ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಯಿತು’ ಎಂದು ಮುಖ್ಯ ಶಿಕ್ಷಕ ಸೋಮಲಿಂಗಪ್ಪ ತಿಳಿಸಿದರು.

ಸಿಂಧನೂರು ಸಿಪಿಐ ಉಮೇಶ ಕಾಂಬಳೆ ಹಾಗೂ ತುರ್ವಿಹಾಳ ಪಿಎಸ್ಐ ಚಂದ್ರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.