ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸ್‌ನಲ್ಲಿ ಬಿಟ್ಟಿದ್ದ ₹2.50 ಲಕ್ಷ ಪ್ರಯಾಣಿಕನಿಗೆ ಮರಳಿಸಿದ ನಿರ್ವಾಹಕ

Published 19 ಜೂನ್ 2024, 15:38 IST
Last Updated 19 ಜೂನ್ 2024, 15:38 IST
ಅಕ್ಷರ ಗಾತ್ರ

ರಾಯಚೂರು: ಬಸ್‌ನಲ್ಲಿಯೇ ₹2.50 ಲಕ್ಷ ಇದ್ದ ಬ್ಯಾಗ್ ಬಿಟ್ಟುಹೋಗಿದ್ದ ಪ್ರಯಾಣಿಕನಿಗೆ ಬಸ್‌ ನಿರ್ವಾಹಕ ಹಾಗೂ ಚಾಲಕ ಅದನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಮಾನ್ವಿ ಬಸ್‌ ನಿಲ್ದಾಣದಿಂದ ರಾಯಚೂರಿಗೆ ಬರುತ್ತಿದ್ದ ಪ್ರಯಾಣಿಕ ಸೋಮಶೇಖ‌ರ ಪಾಟೀಲ ರಾಯಚೂರಿನಲ್ಲಿ ಇಳಿದು ಹೋಗುವಾಗ ಹಣವಿದ್ದ ಬ್ಯಾಗ್ ಅನ್ನು ಬಸ್‌ನಲ್ಲಿಯೇ ಬಿಟ್ಟುಹೋಗಿದ್ದರು.

ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರು ಇಳಿದ ನಂತರ ಕಂಡಕ್ಟರ್ ಕಣ್ಣಿಗೆ ಬ್ಯಾಗ್‌ ಕಾಣಿಸಿಕೊಂಡಿದೆ. ಬ್ಯಾಗ್ ತೆರೆದು ನೋಡಿದಾಗ ₹2.50 ಲಕ್ಷ ಇತ್ತು. ಜತೆಗೆ ಬ್ಯಾಂಕ್ ಪಾಸ್‌ಬುಕ್ ಸಹ ಇರುವುದರಿಂದ ಅದರಲ್ಲಿ ಮೊಬೈಲ್‌ ಸಂಖ್ಯೆ ದೊರೆತಿದೆ.

‘ಬ್ಯಾಂಕ್‌ ಪಾಸ್‌ಬುಕ್‌ನಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಸೋಮಶೇಖರ ಪಾಟೀಲ ಅವರನ್ನು ರಾಯಚೂರು ಬಸ್ ನಿಲ್ದಾಣಕ್ಕೆ ಕರೆಸಿಕೊಂಡು ಹಣದ ಸಮೇತ ಬ್ಯಾಗ್ ಹಸ್ತಾಂತರಿಸಿದ್ದೇವೆ’ ಎಂದು ಚಾಲಕ ಮಂಜುನಾಥ ನವಲಗುಂದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT