ಕವಿತಾಳ: ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಖಾಲಿ ಹುದ್ದೆ ಮಾಹಿತಿ ಕೈ ಬಿಟ್ಟ ಹಿನ್ನೆಲೆಯಲ್ಲಿ ಮಾನ್ವಿ ತಾಲ್ಲೂಕಿನ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಸಮಸ್ಯೆ ಮುಂದುವರಿಯಲಿದೆ ಮತ್ತು ಆರೋಗ್ಯ ಸೇವೆ ಒದಗಿಸುವಲ್ಲಿ ಸಮಸ್ಯೆ ಉಂಟಾಗಲಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಸ್ಥಳ ಆಯ್ಕೆಗೆ ಸಮಾಲೋಚನೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ವೃಂದ ಮತ್ತು ಉಳಿದ ವೃಂದದ ಅಂತಿಮ ಆಯ್ಕೆ ಪಟ್ಟಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮತ್ತಿತರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ಆಯ್ಕೆಗೆ ಡಿ.26 ರಿಂದ 31 ರವರೆಗೆ ಕೌನ್ಸೆಲಿಂಗ್ ನಡೆದಿದೆ.

ಇಲಾಖೆ ಮಾಹಿತಿ ಆಧರಿಸಿ ವಿಶೇಷ ನೇಮಕಾತಿ ಸಮಿತಿ ನೀಡಿದ್ದ ಖಾಲಿ ಹುದ್ದೆ ಮೊದಲ ಪಟ್ಟಿಯಲ್ಲಿ ಮಾನ್ವಿ ತಾಲ್ಲೂಕಿನ ಕುರ್ಡಿ, ಪೊತ್ನಾಳ, ಪಾಮನಕಲ್ಲೂರು, ತೋರಣದಿನ್ನಿ, ಸಿರವಾರ, ಬ್ಯಾಗವಾಟ್ ಮತ್ತು ಹಿರೇಕೊಟ್ನೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುದ್ದೆ ಖಾಲಿ ಎಂದು ತೋರಿಸಲಾಗಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಈ ಸ್ಥಳಗಳನ್ನು ತೆಗದು ಹಾಕಲಾಗಿದ್ದು ಈ ಹುದ್ದೆಗಳು ಖಾಲಿ ಉಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಈ ಸ್ಥಳದಲ್ಲಿ ಆಯ್ಕೆ ಬಯಸಿದ್ದ ಸ್ಥಳೀಯ ಅಭ್ಯರ್ಥಿಗಳಿಗೂ ನಿರಾಸೆಯಾಗಿದೆ.

ಜಿಲ್ಲೆಯ ರಾಯಚೂರು (5), ಲಿಂಗಸುಗೂರು (4), ದೇವದುರ್ಗ (7), ಸಿಂಧನೂರು (9) ಖಾಲಿ ಹುದ್ದೆ ತೋರಿಸಲಾಗಿದ್ದು ಮೊದಲ ಪಟ್ಟಿಯಲ್ಲಿದ್ದ ಮಾನ್ವಿ ತಾಲ್ಲೂಕಿನ (7) ಸ್ಥಳಗಳನ್ನು ಪರಿಷ್ಕೃತ ಪಟ್ಟಿಯಲ್ಲಿ ಕೈ ಬಿಡಲಾಗಿದೆ. ಈ ಸ್ಥಳ ಆಯ್ಕೆಗೆ ಆಸಕ್ತಿ ಹೊಂದಿದ್ದ ಸ್ಥಳೀಯ ಅಭ್ಯರ್ಥಿಗಳು ಅನ್ಯ ತಾಲ್ಲೂಕು ಮತ್ತು ನೆರೆ ಜಿಲ್ಲೆ ಆಯ್ಕೆ ಮಾಡಿಕೊಳ್ಳುವಂತಾಗಿದೆ.

‘ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ ಹುದ್ದೆಗಳು ಖಾಲಿ ಉಳಿಯುವಂತಾಗಿದೆ ಮತ್ತೊಂದೆಡೆ ಸ್ಥಳೀಯ ಅಭ್ಯರ್ಥಿಗಳು ಬೇರೆ ಸ್ಥಳಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ’ ಎಂದು ಹೆಸರು ಹೇಳಲು ಬಯಸದ ಅಭ್ಯರ್ಥಿಯೊಬ್ಬರು ಆರೋಪಿಸಿದರು.

‘ಖಾಲಿ ಹುದ್ದೆ ಮಾಹಿತಿ ಸಲ್ಲಿಸಿದ್ದು ಮೊದಲ ಪಟ್ಟಿಯಲ್ಲಿ ಮಾನ್ವಿ ತಾಲ್ಲೂಕಿನ 7 ಸ್ಥಳ ತೋರಿಸಲಾಗಿತ್ತು. ದೀರ್ಘ ಅವಧಿಗೆ ಖಾಲಿ ಉಳಿದ ಸ್ಥಳವನ್ನು ಕ್ರಿಟಿಕಲ್ ಮತ್ತು ಇತ್ತೀಚೆಗೆ ತೆರವಾದ ಸ್ಥಳವನ್ನು ನಾನ್ ಕ್ರಿಟಿಕಲ್ ಎಂದು ಪ್ರತ್ಯೇಕಿಸಿ ಹುದ್ದೆ ಭರ್ತಿಗೆ ಇಲಾಖೆ ಮುಂದಾಗಿದ್ದು ಕ್ರಿಟಿಕಲ್ ಸ್ಥಳಕ್ಕೆ ಮೊದಲ ಆದ್ಯತೆ ನೀಡಿದ್ದರಿಂದ ನಾನ್ ಕ್ರಿಟಿಕಲ್ ಸ್ಥಳ ತೋರಿಸಿಲ್ಲ ಎನ್ನಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣಬಸವರಾಜಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.