ಮಸ್ಕಿ: ‘ಪಟ್ಟಣದ ವಿವಿಧ ವಾರ್ಡ್ ಹಾಗೂ ರಸ್ತೆಗಳನ್ನು ಹಸಿರನ್ನಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಮುಖ್ಯಶಿಕ್ಷಕ ಸಿದ್ದಾರೆಡ್ಡಿ ಗಿಣಿವಾರ ಹೇಳಿದರು.

ಪಟ್ಟಣದ ಬಸವೇಶ್ವರ ನಗರದ ಪಲ್ಲೆದ್ ಕಾಲೊನಿಯಲ್ಲಿ ಭಾನುವಾರ ಅಭಿನಂದನ್ ಸಂಸ್ಥೆ ಹಾಗೂ ಪ್ರಕೃತಿ ಫೌಂಡೇಶನ್ನ ಸಹಯೋಗದಲ್ಲಿ ನಡೆದ ಪರಿಸರ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅಭಿನಂದನ್ ಸಂಸ್ಥೆ 206ನೇ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನವನ್ನು ಮನೆಗೊಂದು ಮರ ಅಭಿಯಾನವನ್ನಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ’ ಎಂದರು.

ಮಸ್ಕಿ ಪಟ್ಟಣವನ್ನು ಹಸಿರು ಪಟ್ಟಣವನ್ನಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಅಭಿನಂದನ್ ಸಂಸ್ಥೆಯ ಸಂಸ್ಥಾಪಕ ರಾಮಣ್ಣ ಹಂಪರಗುಂದಿ, ಕುಮಾರೆಪ್ಪ ಕಮತರ, ಬಸವರಾಜ ಯದ್ದಲದಿನ್ನಿ, ಶಾಂತಕುಮಾರ, ರಾಜಣ್ಣ ಸಾನಬಾಳ, ವೀರೇಶ ಕಮತರ, ಸೂಗೂರಯ್ಯ, ಸುರೇಶ ಬ್ಯಾಳಿ, ಮಲ್ಲಿಕಾರ್ಜುನ ಪಾಟೀಲ, ಸೂಗೂರೆಡ್ಡಿ, ನಾಗರಾಜ ಕುಂಬಾರ, ಸೋಮಶೇಖರ, ಸಿರವಾರ ಮಠ, ಸ್ಕೌಟ್ ಗೈಡ್ಸ್ನ ಸದಸ್ಯರು ಹಾಗೂ ಅಭಿನಂದನ್ ಸ್ಪೂರ್ತಿ ಧಾಮದ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.