ಬುಧವಾರ, ನವೆಂಬರ್ 20, 2019
21 °C

ಕ್ರಿಕೆಟ್‌ ಪಂದ್ಯಾವಳಿ ಜಯಿಸಿದ ಗುಡ್‌ ಮಾರ್ನಿಂಗ್‌ ತಂಡ

Published:
Updated:

ರಾಯಚೂರು: ನಗರದ ಪ್ರಕಾಶ ಕ್ರಿಕೆಟ್ ಕ್ಲಬ್‌ನಿಂದ ಈಚೆಗೆ ಆಯೋಜಿಸಿದ್ದ 10 ಓವರ್‌ಗಳ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಗುಡ್‌ ಮಾರ್ನಿಂಗ್‌ ತಂಡ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ವಾರಿಯರ ತಂಡ 10 ಓವರ್‌ಗಳಲ್ಲಿ 73 ರನ್‌ ಗಳಿಸಿತು. ಗುಡ್‌ ಮಾರ್ನಿಂಗ್ ತಂಡ 8.4 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಗುರಿಮುಟ್ಟಿತು. ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.

ಮುಕ್ತಾಯ ಸಮಾರಂಭದಲ್ಲಿ ವಿಜೇತ ತಂಡಕ್ಕೆ ನಗರಸಭೆ ಸದಸ್ಯ ಸಾಜೀದ್ ಸಮೀರ್, ವಿಜಯಕುಮಾರ ಪಟ್ಟಿ, ಬಸವಪ್ರಸಾದ, ರಾಜೇಶ, ಬಷೀರುದ್ದೀನ್, ಈರಣ್ಣ ಯಾದವ ಬಹುಮಾನ ವಿತರಣೆ ಮಾಡಿದರು. ಶ್ರೀನಿವಾಸ, ಸಂದೀಪ್, ರಮೇಶಗೌಡ, ಈರೇಶ ಅರಗೋಲ ಇದ್ದರು.

ಪ್ರತಿಕ್ರಿಯಿಸಿ (+)