ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಹಾನಿ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ

Published 16 ನವೆಂಬರ್ 2023, 14:02 IST
Last Updated 16 ನವೆಂಬರ್ 2023, 14:02 IST
ಅಕ್ಷರ ಗಾತ್ರ

ತುರ್ವಿಹಾಳ: ಹೋಬಳಿಯ ಗ್ರಾಮಗಳಾದ ಕಲಮಂಗಿ, ಊಮಲೂಟಿ, ವೀರಾಪೂರ ಸೇರಿ ವಿವಿಧೆಡೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಬುಧವಾರ ಬೆಳೆಹಾನಿ ಹಾಗೂ ಬರ ವಿಕ್ಷಣೆ ನಡೆಸಿದರು.

ನಂತರ ಮಾತನಾಡಿದ ಅವರು, ಸಿಂಧನೂರು ತಾಲ್ಲೂಕಿನ ಹಲವು ಗ್ರಾಮಗಳು ಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಮಳೆಯಿಂದಾಗಿ ಕಡಲೆ ಬಿತ್ತಿದ ಹೊಲಗಳು ಹಾನಿಯಾಗಿವೆ. ತೊಗರಿ, ಜೋಳ ಇತರೆ ಬೆಳೆಗಳು ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಬೆಳೆಹಾನಿ ವರದಿಯನ್ನು ಸರ್ಕಾರಕ್ಕೆ ನೀಡಿದರೆ ಪರಿಹಾರ ನೀಡುವುದಕ್ಕೆ ಅನುಕೂಲವಾಗುತ್ತದೆ ಎಂದರು.

ಸಿಂಧನೂರು ತಹಶೀಲ್ದಾರ್‌ ಅರುಣ ದೇಸಾಯಿ, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ನಜೀರ ಅಹ್ಮದ್, ಕಂದಾಯ ಇಲಾಖೆ ಬೂದೆಪ್ಪ, ತಾಲ್ಲೂಕ ಪಂಚಾಯಿತಿ ಅಧಿಕಾರಿ ಚಂದ್ರಶೇಖರ ಗುಂಜಳ್ಳಿ, ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಕಾಂಗರೆಸ್ ಮುಖಂಡರು, ರೈತರಾದ ರಾಮಣ್ಣ, ಅಮರೇಶ ಹತ್ತಿಗುಡ್ಡ ಇತರರು ಇದ್ದರು.

ಚಿತ್ರಶೀರ್ಷಿಕೆ: ತುರ್ವಿಹಾಳ ಹೋಬಳಿಯ ಹಲವು ಗ್ರಾಮಗಳಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಅಧಿಕಾರಿಗಳಿಂದ ಬೆಳೆ ಪರಿಶೀಲನೆ ನಡೆಯಿತು.
ಚಿತ್ರಶೀರ್ಷಿಕೆ: ತುರ್ವಿಹಾಳ ಹೋಬಳಿಯ ಹಲವು ಗ್ರಾಮಗಳಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಅಧಿಕಾರಿಗಳಿಂದ ಬೆಳೆ ಪರಿಶೀಲನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT