ರಾಯಚೂರು: ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್‌ಗಾಗಿ ನಡೆದ ಹೋರಾಟ ವೇದಿಕೆಯಲ್ಲಿ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ ಸೋಮವಾರ ನಡೆಸಲಾಯಿತು.
ಕವಿಗೋಷ್ಠಿ ಉದ್ಘಾಟಿಸಿದ ಸಾಹಿತಿ ವೀರಹನುಮಾನ ಮಾತನಾಡಿ, ನಿರಂತರ ಹೋರಾಟ ಮಾಡಿದರೂ, ಏಮ್ಸ್‌ಗಾಗಿ ಸರ್ಕಾರ ಮಾತನಾಡುತ್ತಿಲ್ಲ. ಮೂಕವಾಗಿದೆ ಸರ್ಕಾರ, ರಾಯಚೂರಿನ ಜನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಹೃದಯ ಹೀನವಾಗಿದೆ ಸರ್ಕಾರ ಎಂದರು.
ವಾಸ್ತವಿಕವಾಗಿ ಕವಿಯಾದವನು, ಸಾಹಿತಿಯಾದವನು, ಸಮಾಜಮುಖಿಯಾಗಿರಬೇಕು. ಜನ ಪರವಾಗಿರಬೇಕು, ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು. ಈ ನಾಡಿನಲ್ಲಿ ಅನೇಕ ಚಳವಳಿಗಳು ನಡೆದಿವೆ. ಅದರಲ್ಲಿ ಶರಣ ಚಳವಳಿ, ದಾಸ ಚಳವಳಿ, ಮತ್ತು ದಲಿತ, ಬಂಡಾಯ ಚಳವಳಿಗಳು ನಡೆದಿರುವುದು ಸಾಹಿತ್ಯ ಬರಹದ ಮೂಲಕವೇ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಆಂಜನೇಯ ಜಾಲಿಬೆಂಚಿ ಮಾತನಾಡಿ, ಏಮ್ಸ್ ಗಾಗಿ ನಡೆದ ಈ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅನೇಕ ಕವಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಕವಿಗಳು ತಮ್ಮ ಗಟ್ಟಿ ನಿಲುವನ್ನು ವ್ಯಕ್ತಪಡಿಸಿದ್ದು ತುಂಬಾ ಸಂತೋಷವಾಗಿದೆ ಎಂದರು.
ಜನಸಂಗ್ರಮ ಪರಿಷತ್ತಿನ ಗೌರವ ಅಧ್ಯಕ್ಷ ಜಾನ ವೆಸ್ಲೀ, ಸಿಂಧನೂರಿನ ರಂಗ ಸಮುದಾಯದ ದೇವೇಂದ್ರ ಗೌಡ, ಡಾ. ಬಸವರಾಜ ಕಳಸ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಆಂಜನೇಯ ಕಾವಲಿ, ರಾವುತರಾವ್ ಬರೂರ ಮತ್ತಿತರರು ಇದ್ದರು.
ಕವಿಗೊಷ್ಠಿಯಲ್ಲಿ ಎಂ. ಬಿ. ಲಕ್ಷ್ಮಿ ರೆಡ್ಡಿ, ರಾಮಣ್ಣ ಬೋಯರ್ , ಬಷಿರ ಅಹ್ಮದ್ ಹೊಸಮನಿ, ಪಂಪಯ್ಯ ಸ್ವಾಮಿ ಶಾಸ್ತ್ರಿ, ಕೊರೆನಲ, ರೇಖಾ ಪಾಟೀಲ್, ಭಾರತಿ ಕುಲಕರ್ಣಿ, ಖಾನ್ ಸಾಬ್ ಮೊಮಿನ್ , ಮಲ್ಲೇಶ್ ಭೈರವ್ ,ಶರಬಸವ ಗುಡದಿನ್ನಿ, ದೇವೇಂದ್ರ ಕಟ್ಟಿಮನಿ, ಶಿವಮೂರ್ತಿ, ನರಸಪ್ಪ ಗೋನವಾರ್, ಸುಕಲತಾ, ರಾಣಿ ಡೇವಿಡ್, ವೇಣು ಜಾಲಿಬೆಂಚಿ ಸೇರಿದಂತೆ 25ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.
ಸುಲೋಚನಾ ಪ್ರಾರ್ಥಿಸಿದರು. ಬಿ. ವಿಜಯ ರಾಜೇಂದ್ರ ನಿರೂಪಿಸಿದರು. ಅಶೋಕ್ ಕುಮಾರ್ ಸಿ. ಕೆ. ಜೈನ್ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.