ಸಿಂಧನೂರು: ‘ವಿದ್ಯಾರ್ಥಿಗಳಲ್ಲಿ ಅಕ್ಷರದ ಜ್ಞಾನದಲ್ಲಿ ಕೊರತೆಯಿದ್ದರೂ ಚಿಂತೆ ಇಲ್ಲ. ಆದರೆ ಸಂಸ್ಕಾರದಲ್ಲಿ ಕೊರತೆ ಬರಬಾರದು’ ಎಂದು ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರೀವಿಕ್ಷಕ ಸೋಮಲಿಂಗಪ್ಪ ಅಭಿಪ್ರಾಯಪಟ್ಟರು.

ಸ್ಥಳೀಯ ಸತ್ಯಗಾರ್ಡನ್ನಲ್ಲಿ ಗುರುವಾರ ನಡೆದ ಎಲ್ಬಿಕೆ ಪದವಿ ಪೂರ್ವ ಮತ್ತು ನೊಬಲ್ ಪದವಿ ಮಹಾವಿದ್ಯಾಲಯದ ಪಿಯುಸಿ, ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿದರು.

2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 584 (ಶೇ97.33) ಅಂಕ ಪಡೆದು ವಾಣಿಜ್ಯ ಭಾಗದಲ್ಲಿ ರಾಯಚೂರು ಜಿಲ್ಲೆಗೆ ದ್ವಿತೀಯ ಹಾಗೂ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರಾದ ಸಂಜನಾ ಗೋವಿಂದಗೌಡ, ಶಾಂತಮ್ಮ ಶರಣಪ್ಪ ಹಿರೇಬೇರಿಗಿ ಮತ್ತು ಸಂಗೀತಾ ಯಮನೂರಪ್ಪ ಹಿರೇಬೇರಿಗಿ ಅವರನ್ನು ಸನ್ಮಾನಿಸಲಾಯಿತು.

ಅಲಬನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಶಿವರಾಜ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಬಸಪ್ಪ ಹ್ಯಾಟಿ, ರಾಯಚೂರಿನ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್ ಸದಸ್ಯರಾದ ಸತ್ಯನಾರಾಯಣ ಶ್ರೇಷ್ಠಿ, ಅನಿಲಕುಮಾರ ಕೆ, ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಚ್.ಎಫ್.ಮಸ್ಕಿ, ಶರಣೆ ನೀಲಾಂಬಿಕೆ ಉಚಿತ ಪ್ರಸಾದ ನಿಲಯದ ಮೇಲ್ವಿಚಾರಕಿ ಜಯಶ್ರೀ ಎಸ್.ಮೇಟಿ, ಮುಕ್ತ ಬ್ಯಾಂಕಿನ ಅಧ್ಯಕ್ಷ ಗುಂಡಪ್ಪ ಬಳಿಗಾರ, ಮುಖಂಡರಾದ ಮಂಜುನಾಥ ಗಾಂಧಿನಗರ, ರಮೇಶ ಉಮಲೂಟಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಬಸವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದುನಗೌಡ ಮಾಲಿಪಾಟೀಲ, ಸಮುದಾಯದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಸಂಸ್ಥೆಯ ಅಧ್ಯಕ್ಷ ಪರಶುರಾಮ ಮಲ್ಲಾಪುರ, ಕಾರ್ಯದರ್ಶಿ ಡಾ.ಅರುಣಕುಮಾರ ಬೇರಿಗಿ, ಖಜಾಂಚಿ ಜಯಪ್ಪ ಗೊರೇಬಾಳ, ನೊಬೆಲ್ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಐಶ್ವರ್ಯ ದಳವಾಯಿ, ಎಲ್ಬಿಕೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವುಕುಮಾರ ಬಿಂಗಿ, ಉಪಾಧ್ಯಕ್ಷ ಶಂಕರ ಪತ್ತಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.